ಕರ್ನಾಟಕ

karnataka

ETV Bharat / city

ಸಾರಿಗೆ ಸಚಿವರ ಕ್ಷೇತ್ರದಲ್ಲಿ ಕೊರೊನಾ ಭಯ: ಸೋಂಕಿತ ಗ್ರಾಮಗಳಿಗೆ ಬಸ್ ಸಂಚಾರ ಬಂದ್ - ಸೋಂಕಿತ ಗ್ರಾಮಗಳಿಗೆ ಬಸ್ ಸಂಚಾರ ಬಂದ್

ಅಥಣಿ ತಾಲೂಕಿನಲ್ಲಿ ಕೊರೊನಾ ವೈರಸ್ ಕಂಡುಬಂದ ಗ್ರಾಮಗಳಾದ, ಝುಂಜರವಾಡ, ನಂದಗಾಂವ್, ಸವದಿ, ಖವಟಗೋಪ್ಪ, ಗ್ರಾಮಗಳಿಗೆ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಅಥಣಿ ಘಟಕ ಸಂಚಾರಿ ಕಾರ್ಯನಿರ್ವಾಹಕ ದುಂಡಪ್ಪ ಕಿರಣಗಿ ತಿಳಿಸಿದ್ದಾರೆ.

Fear of Corona, bus stop to infected villages
ಸಾರಿಗೆ ಸಚಿವರ ಕ್ಷೇತ್ರದಲ್ಲಿ ಕೊರೊನಾ ಭಯ, ಸೋಂಕಿತ ಗ್ರಾಮಗಳಿಗೆ ಬಸ್ ಸಂಚಾರ ಬಂದ್

By

Published : May 28, 2020, 6:02 PM IST

Updated : May 28, 2020, 10:31 PM IST

ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರ ಅಥಣಿ ತಾಲೂಕಿನಲ್ಲಿ ಕೊರೊನಾ ವೈರಸ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ತೆರಳುವುದಕ್ಕೆ ಹಿಂಜರಿಯುತ್ತಿದ್ದಾರೆ. ಇದರಿಂದ ಸಂಪೂರ್ಣವಾಗಿ ಬಸ್ ಸಂಚಾರ ಸ್ತಬ್ಧವಾಗಿದೆ.

ಶಿವಯೋಗಿಗಳ ನಾಡಿನಲ್ಲಿ ಒಂದೇ ದಿನದಲ್ಲಿ 12 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಅಥಣಿ ತಾಲೂಕಿನಲ್ಲಿ ಕೊರೊನಾ ವೈರಸ್ ಕಂಡುಬಂದ ಗ್ರಾಮಗಳಾದ, ಝುಂಜರವಾಡ, ನಂದಗಾಂವ್, ಸವದಿ, ಖವಟಗೊಪ್ಪ, ಗ್ರಾಮಗಳಿಗೆ ಬಸ್ ಸಂಚಾರ ನಿಲ್ಲಿಸಲಾಗಿದೆ. ಇದರಿಂದ ನೆರೆ ಹಳ್ಳಿಗಳ ಪ್ರಯಾಣಿಕರು ಪರದಾಡುವಂತಾಗಿದೆ.

ಈವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ವಿಭಾಗದ ಅಥಣಿ ಘಟಕ ಸಂಚಾರಿ ಕಾರ್ಯನಿರ್ವಾಹಕ ದುಂಡಪ್ಪ ಕಿರಣಗಿ ಅವರು ದೂರವಾಣಿ ಮೂಲಕ ಮಾತನಾಡಿದಾಗ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್-19 ಪ್ರಕರಣಗಳು ಕಂಡುಬಂದಿವೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಹಾಗೂ ನಮ್ಮ ಸಾರಿಗೆ ಸಿಬ್ಬಂದಿ ಗ್ರಾಮಗಳಿಗೆ ಸಂಚಾರ ಮಾಡುವುದಕ್ಕೆ ಹೆದರುತ್ತಿದ್ದಾರೆ. ಇದರಿಂದ ನಾವು ಸಂಚಾರ ನಿಲ್ಲಿಸಿದ್ದೇವೆ ಮಾಡಿದ್ದೇವೆ ಎಂದು, ಈಟಿವಿ ಭಾರತಕ್ಕೆ ಸ್ಪಷ್ಟನೆ ನೀಡಿದರು.

ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲಿ ಕೆಎಸ್ಆರ್ ಟಿಸಿ ಸಿಬ್ಬಂದಿ ಸೋಂಕಿಗೆ ಹೆದರಿ ಏಕಾಏಕಿ ಬಸ್ ಸಂಚಾರ ಬಂದ್ ಮಾಡಿದ್ದಾರೆ. ಇದರ ಪರಿಣಾಮ ನೆರೆ ಹಳ್ಳಿಗಳ ಮೇಲೆ ಬಿದ್ದಿದೆ. ಸೋಂಕು ಇಲ್ಲದ ಹಳ್ಳಿಗಳಿಗಾದರೂ ಬಸ್ ಸಂಚಾರ ಪ್ರಾರಂಭಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Last Updated : May 28, 2020, 10:31 PM IST

ABOUT THE AUTHOR

...view details