ಚಿಕ್ಕೋಡಿ:ಡೆಂಘೀ ಜ್ವರದಿಂದಾಗಿ ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಗುಮಾಸ್ತ(ಎಫ್‌ಡಿಎ) ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಚಿಕ್ಕೋಡಿಯಲ್ಲಿ ಡೆಂಘೀ ಜ್ವರದಿಂದ ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಸಾವು.. - ಅಥಣಿಯ ಎಫ್‌ಡಿಎ ಅಧಿಕಾರಿ ಪ್ರಶಾಂತ ಅಣ್ಣಪ್ಪ ಮೇಣಸಂಗಿ
ಡೆಂಘೀ ಜ್ವರದಿಂದ ಬಳಲುತ್ತಿದ್ದ ಅಥಣಿಯ ಎಫ್‌ಡಿಎ ಪ್ರಶಾಂತ ಅಣ್ಣಪ್ಪ ಮೇಣಸಂಗಿ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
![ಚಿಕ್ಕೋಡಿಯಲ್ಲಿ ಡೆಂಘೀ ಜ್ವರದಿಂದ ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಸಾವು..](https://etvbharatimages.akamaized.net/etvbharat/prod-images/768-512-4335193-thumbnail-3x2-ckd.jpg)
ಡೆಂಗ್ಯು ಜ್ವರದಿಂದ ಎಫ್‌ಡಿಎ ಅಧಿಕಾರಿ ಸಾವು
ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಪ್ರಶಾಂತ ಅಣ್ಣಪ್ಪ ಮೇಣಸಂಗಿ(26) ಸಾವನ್ನಪ್ಪಿರುವ ಸರ್ಕಾರಿ ನೌಕರ. ಇವರು ನೆರೆ ಹಾವಳಿ ಪ್ರದೇಶವಾದ ಅಥಣಿ ತಾಲೂಕಿನ ಮುರಗುಂಡಿ ಪರಿಹಾರ ಕೇಂದ್ರದಲ್ಲಿ ಸಹಾಯಕ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೆಲವು ದಿನಗಳಿಂದ ಕೆಮ್ಮು, ಜ್ವರದಿಂದಾಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚೇತರಿಸಿಕೊಳ್ಳದ ಕಾರಣ ಮಹಾರಾಷ್ಟ್ರದ ಮಿರಜ್ ಖಾಸಗಿ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿತ್ತು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರುತಿಳಿಸಿದ್ದಾರೆ.