ಕರ್ನಾಟಕ

karnataka

ETV Bharat / city

ಅನೈತಿಕ ಸಂಬಂಧ ಶಂಕೆ: ಕುಪಿತ ತಂದೆಯ ಕೋಪಕ್ಕೆ 4 ವರ್ಷದ ಪುತ್ರ ಬಲಿ, ಪತ್ನಿ ಗಂಭೀರ - ಬೆಳಗಾವಿಯಲ್ಲಿ ಪತ್ನಿ ಅಕ್ರಮ ಸಂಬಂಧ ಶಂಕೆಯಿಂದ ಮಗುವಿನ ಹತ್ಯೆ

ಹೆಂಡತಿ ಮೇಲೆ ವಿವಾಹೇತರ ಸಂಬಂಧದ ಶಂಕೆಯಿಂದ ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಪುಟ್ಟ ಮಗನನ್ನು ಕಬ್ಬಿನ ಗದ್ದೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

Father killed a son in Belagavi, child murder over suspected of wife illegal relationship in Belagavi, Belagavi crime news, ಬೆಳಗಾವಿಯಲ್ಲಿ ಮಗನ ಕೊಂದ ತಂದೆ, ಬೆಳಗಾವಿಯಲ್ಲಿ ಪತ್ನಿ ಅಕ್ರಮ ಸಂಬಂಧ ಶಂಕೆಯಿಂದ ಮಗುವಿನ ಹತ್ಯೆ, ಬೆಳಗಾವಿ ಅಪರಾಧ ಸುದ್ದಿ,
ಕಬ್ಬಿನ‌ ಕದ್ದೆಯಲ್ಲಿ 4ವರ್ಷದ ಮಗನ ಕತ್ತು ಸೀಳಿದ ತಂದೆ

By

Published : Jul 27, 2022, 7:10 AM IST

ಬೆಳಗಾವಿ:ವಿವಾಹೇತರ ಸಂಬಂಧ ಶಂಕಿಸಿ ಪತಿಯೊಬ್ಬ ಪತ್ನಿ ಮತ್ತು ಮಗನ ಕತ್ತು ಸೀಳಿದ್ದಾನೆ. ನಾಲ್ಕು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಪತ್ನಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ‌. ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದ ಹೊರವಲಯದಲ್ಲಿರುವ ಘಟನೆ ನಡೆದಿದೆ.

ಮಗು ಬಾಳೇಶ ಅಕ್ಕಣಿ (4) ಸಾವನ್ನಪ್ಪಿದ್ದಾನೆ. ತಾಯಿ ಲಕ್ಷ್ಮೀ ಮುತ್ತೆಪ್ಪ ಅಕ್ಕಣಿ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಮುತ್ತೆಪ್ಪ ಅಕ್ಕಣಿ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳಕ್ಕೆ ಗೋಕಾಕ ಡಿವೈಎಸ್ಪಿ ಮನೋಜಕುಮಾರ್, ಗೋಕಾಕ ಗ್ರಾಮೀಣ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿರೋಧದ ನಡುವೆಯೂ ಮದುವೆಯಾದ ಜೋಡಿ: ಅಮಾನುಷವಾಗಿ ಕೊಲೆ ಮಾಡಿದ ತಂದೆ

ABOUT THE AUTHOR

...view details