ಬೆಳಗಾವಿ:ಕಳಪೆ ಸೋಯಾಬಿನ್ ಬಿತ್ತನೆ ಬೀಜ ಪೂರೈಕೆ ಮಾಡಿದ ಕೃಷಿ ಅಧಿಕಾರಿಗಳನ್ನ ರೈತರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ನಡೆದಿದೆ.
ಕಳಪೆ ಸೋಯಾಬಿನ್ ಬೀಜ ವಿತರಣೆ.. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು - Belgaum News
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಕಳಪೆ ಸೋಯಾಬಿನ್ ಬಿತ್ತನೆ ಬೀಜ ಪೂರೈಕೆ ಮಾಡಿದ್ದ ಕೃಷಿ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.
ಕಳಪೆ ಸೋಯಾಬಿನ್ ಬಿತ್ತನೆ ಬೀಜ ವಿತರಣೆ..ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ರೈತರು
ರೈತರಿಗೆ ಅವಧಿ ಮುಗಿದ ಬೀಜಗಳನ್ನು ವಿತರಣೆ ಮಾಡಿದ್ದಲ್ಲದೇ, ಸೋಯಾಬಿನ್ ಬೀಜದ ಚೀಲದ ಮೇಲಿರುವ 2018ರ ಇಸವಿಯನ್ನ, 2020 ಎಂದು ತಿದ್ದಿ ವಿತರಣೆ ಮಾಡಿದ್ದಾರೆ. ಇದರಿಂದಾಗಿ ಬಿತ್ತನೆ ಮಾಡಿ 15 ದಿನಗಳಾದರೂ ಬೀಜಗಳು ಮೊಳಕೆಯೊಡೆದಿರಲಿಲ್ಲ.
ಈ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಇಲಾಖೆಯ ಅಧಿಕಾರಿಗಳನ್ನ ರೈತರು ತರಾಟೆಗೆ ತೆಗೆದುಕೊಂಡು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.