ಬೆಳಗಾವಿ :ವಿವಾದಿತ ಮೂರುಕೃಷಿ ಕಾಯ್ದೆ ವಾಪಸ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬಾರುಕೋಲು ಚಳವಳಿಗೆ ಮುಂದಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಜಮಾಗೊಂಡ ರೈತರು ಬಾರುಕೋಲ ಬಾರಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧದವರೆಗೆ ಬಾರುಕೋಲು ಚಳವಳಿಗೆ ಮುಂದಾಗುತ್ತಿದ್ದಂತೆ ಎಲ್ಲ ರೈತರನ್ನು ಪೊಲೀಸರು ಸಾರಿಗೆ ಬಸ್ನಲ್ಲಿ ತುಂಬಿಕೊಂಡು ಸುವರ್ಣ ಗಾರ್ಡನ್ನಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ದರು.