ಅಥಣಿ:ಕೇಂದ್ರ ಸರ್ಕಾರದ ಎಪಿಎಂಸಿ-2017 ಕಾಯ್ದೆ ತಿದ್ದುಪಡಿ ಮತ್ತು ಖಾಸಗೀಕರಣವನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವಿರೋಧಿಸಿದೆ.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಮಹದೇವ ಮಡಿವಾಳ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ರೈತರಿಗೆ ತೀವ್ರ ತೊಂದರೆ ಉಂಟಾಗುತ್ತದೆ. ಇದಕ್ಕೆ ರಾಜ್ಯಾದ್ಯಂತ ರೈತಸಂಘ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾದ ಕೇಂದ್ರ, ರೈತರ ವಿರೋಧ ಭಾರಿ ಮಳೆಯಿಂದಾಗಿ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಬಂದು ಹಾನಿ ಸಂಭವಿಸಿದೆ. ರೈತರು ಸಾಲ ಮಾಡಿ ಬೆಳೆದಿದ್ದ ಬೆಳೆ ಹಾನಿಗೆ ಪರಿಹಾರ ಬರದೆ ಇರುವುದರಿಂದ ತೀವ್ರ ತೊಂದರೆ ಆಗಿದೆ ಎಂದರು.
ಒಂದೆಡೆ ಸಕ್ಕರೆ ಕಾರ್ಖಾನೆಗಳು ಪಾವತಿ ಬಾಕಿ ಉಳಿಸಿಕೊಂಡಿರುವುದು ರೈತರನ್ನು ಬಾಣಲೆಯಿಂದ ಬೆಂಕಿಗೆ ಕೆಡವಿದಂತಾಗಿದೆ. ಸದ್ಯ ಅಕಾಲಿಕ ಮಳೆಯಿಂದ ದ್ರಾಕ್ಷಿ, ಕಲ್ಲಂಗಡಿ ಮಾವು ಬೆಳೆದ ರೈತರು ಸಂಕಷ್ಟದ್ಲಲಿದ್ದು, ರೈತರ ಪರ ಇರುವ ಎಪಿಎಂಸಿಗಳ ಖಾಸಗೀಕರಣ ಮತ್ತು ರದ್ದತಿ ಸಲ್ಲದು ಎಂದು ಹೇಳಿದರು.