ಬೆಳಗಾವಿ: ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ಮಹದಾಯಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಮಹದಾಯಿ ಯೋಜನೆ ಸಲುವಾಗಿ 500 ಕೋಟಿ ರೂಪಾಯಿ ಹಣ ಮೀಸಲಿಟ್ಟಿರುವುದು ಸಂತಸದ ಸಂಗತಿ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಜೆಟ್ನಲ್ಲಿ ಮಹದಾಯಿಗೆ 500 ಕೋಟಿ ರೂ: ರೈತರ ಮೊಗದಲ್ಲಿ ಹರ್ಷ - ಬಜೆಟ್ಗೆ ಹರ್ಷ ವ್ಯಕ್ತಪಡಿಸಿದ ರೈತರು
ಹಲವು ದಶಕಗಳ ನಿರಂತರ ಹೋರಾಟದ ನಂತರ ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಮಹದಾಯಿ ಯೋಜನೆ ಸಲುವಾಗಿ ರಾಜ್ಯ ಬಜೆಟ್ನಲ್ಲಿ ಸಿಎಂ ಬಿಎಸ್ವೈ 500 ಕೋಟಿ ರೂ. ಹಣ ಮೀಸಲಿಟ್ಟಿರುವುದು ಸಂತಸದ ಸಂಗತಿ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಹರ್ಷ ವ್ಯಕ್ತಪಡಿಸಿದ ರೈತರು
40 ವರ್ಷಗಳ ಮಹದಾಯಿ ಹೋರಾಟದ ಪ್ರತಿಫಲವಾಗಿ ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ತಕ್ಷಣವೇ ಮಹದಾಯಿ ಯೋಜನೆಗೆ ಹೆಚ್ಚಿನ ಹಣ ಮೀಸಲಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದೇವು. ಅದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 500 ಕೋಟಿ ರೂಪಾಯಿ ಬಜೆಟ್ ಮಿಸಲಿಟ್ಟಿದ್ದು ಸಂತಸ ತಂದಿದೆ ಎಂದು ರೈತ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.