ಕರ್ನಾಟಕ

karnataka

ETV Bharat / city

ಕಾಲುವೆಗೆ ನೀರು ಹರಿಸಲು ಆಗ್ರಹ: ಅಧಿಕಾರಿಗಳನ್ನು ಕಚೇರಿಯಲ್ಲೇ ಕೂಡಿ ಹಾಕಿದ ರೈತರು

ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ರೈತರು ಅಧಿಕಾರಿಗಳನ್ನು ಕಚೇರಿಯಲ್ಲೇ ಕೂಡಿ ಹಾಕಿರುವ ಘಟನೆ ನಡೆದಿದೆ.

farmers-demand-water-for-ghataprabha-canal-in-belgaum
ಕಾಲುವೆಗೆ ನೀರು ಹರಿಸುವಂತೆ ಒತ್ತಾಯ : ಅಧಿಕಾರಿಗಳನ್ನು ಕಚೇರಿಯಲ್ಲೇ ಕೂಡಿ ಹಾಕಿದ ರೈತರು

By

Published : May 1, 2022, 10:35 AM IST

ಬೆಳಗಾವಿ: ಕಾಲುವೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿ, ನೀರಾವರಿ ಇಲಾಖೆ ಇಂಜಿನಿಯರ್‌ಗಳು, ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಘಟಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅನ್ನೋದು ಗೋಕಾಕ್, ಮೂಡಲಗಿ ತಾಲೂಕಿನ ರೈತರ ಬೇಡಿಕೆಯಾಗಿದೆ.

ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ, ಕಾಲುವೆಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ನೀರು ಬಿಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ, ರೈತರು ಧರಣಿ ವಾಪಸ್ ಪಡೆದರು.

ಇದನ್ನೂ ಓದಿ:ಕಾರವಾರದಲ್ಲಿ ಮೀನು ಹಿಡಿಯೋ ಆಟ: ಗೋವಾದಿಂದ ನೋಡಲು ಜನ!

For All Latest Updates

ABOUT THE AUTHOR

...view details