ಬೆಳಗಾವಿ: ಕೋವಿಡ್-19 ಭೀತಿಯಲ್ಲಿ ಭಾರತ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ, ಎಲ್ಲ ವ್ಯಾಪಾರ- ವಹಿವಾಟು ಸೇರಿದಂತೆ ಜನ-ಜೀವನ ಸಂಪೂರ್ಣ ಸ್ಥಗಿತಗೊಂಡಿದೆ. ಇದರ ಪರಿಣಾಮ ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ.
ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ಬೆಳೆಯನ್ನ ಕುರಿಗಳಿಗೆ ಮೇಯಲು ಬಿಟ್ಟ ರೈತ..!
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ರೈತ ಗುರುನಾಥ್ ಹುಕ್ಕೇರಿ,ತನ್ನ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಎಲೆಕೋಸು,ಹೂಕೋಸು ಬೆಳೆಯನ್ನ ಕುರಿಗಳು ಮೇಯಲು ಬಿಟ್ಟಿದ್ದಾನೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ರೈತ ಗುರುನಾಥ್ ಹುಕ್ಕೇರಿ,ತನ್ನ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ಎಲೆಕೋಸು ಹಾಗೂ ಒಂದು ಎಕರೆ ಹೂಕೋಸು ಬೆಳೆಗೆ ಒಟ್ಟು 2 ಲಕ್ಷ ವೆಚ್ಚ ಭರಿಸಿ, ಫಲವತ್ತಾದ ಬೆಳೆ ಬೆಳೆದಿದ್ದಾರೆ. ಬೆಳೆ ಉತ್ತಮ ಫಸಲು ಬಂದಿದೆ. ಆದರೆ, ಲಾಕ್ಡೌನ್ ಎಫೆಕ್ಟ್ನಿಂದಾಗಿ ಬೆಳೆದ ಬೆಳೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆಯಿಲ್ಲ. ಹೀಗಾಗಿ ಬೆಳೆದು ನಿಂತ ತನ್ನ ಎರಡು ಎಕರೆ ಜಮೀನಲ್ಲಿ ಕುರಿ ಮೇಯಲು ಬಿಟ್ಟಿದ್ದಾನೆ.
ಹೀಗಾಗಿ ಸರ್ಕಾರ ಬೆಳೆ ನಷ್ಟ ನೀಡಿ,ನೆರವಿನ ಹಸ್ತ ನೀಡಬೇಕು ಎಂದು ರೈತ ಗುರುನಾಥ್ ಹುಕ್ಕೇರಿ ಮನವಿ ಮಾಡಿಕೊಂಡಿದ್ದಾರೆ.