ಚಿಕ್ಕೋಡಿ: ಬೆಳಗಾವಿ ಜಿಲ್ಲೆಚಿಕ್ಕೋಡಿ ಉಪವಿಭಾಗದ ಸಕ್ಕರೆ ಕಾರ್ಖಾನೆಗಳು ತಮ್ಮ ಲಾಭಕ್ಕಾಗಿ ಕಬ್ಬು ಬೆಳೆಯನ್ನು ಸುಟ್ಟು ಕಡಿಯುತ್ತಿರುವುದರಿಂದ ರೈತರು ತೀರ್ವ ನಷ್ಟ ಅನುಭವಿಸುವಂತಾಗಿದೆ. ಕಬ್ಬನ್ನು ಸುಟ್ಟು ಕಟಾವು ಮಾಡುವುದರಿಂದ ಬಿಸಲಿಗೆ ನೀರು ಬಿಡಲು ಪ್ರಾರಂಭಿಸುತ್ತದೆ. ಇದರಿಂದ ಕಬ್ಬು ಬೆಳೆಯ ತೂಕ ಕಡಿಮೆ ಬರುವುದರಿಂದ ರೈತರಿಗೆ ನಷ್ಟವಾಗುತ್ತೆ.
ಬೆಳೆದು ನಿಂತ ಕಬ್ಬಿಗೆ ಬೆಂಕಿ ಇಡ್ತಿರುವ ಕಾರ್ಖಾನೆ ಮಾಲೀಕರು.. ರೈತರ ಲಾಭಕ್ಕೂ ಕೊಳ್ಳಿ! - ಚಿಕ್ಕೋಡಿ ಸುಟ್ಟು ಕಬ್ಬು ಕಟಾವು
ಬೆಳೆದು ನಿಂತ ಕಬ್ಬನ್ನು ತಮ್ಮ ಲಾಭಕ್ಕಾಗಿ ಕಾರ್ಖಾನೆಗಳು ಸುಟ್ಟು ಕಡೆಯಲು ಮುಂದಾಗಿವೆ. ಇದರಿಂದ ಕಬ್ಬು ಬೆಳೆದ ರೈತನಿಗೆ ತೀವ್ರವಾಗಿ ಹಾನಿಯಾಗುತ್ತಿದೆ. ಅಲ್ಲದೆ ಕಬ್ಬು ಕಟಾವು ಮಾಡುವ ಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
![ಬೆಳೆದು ನಿಂತ ಕಬ್ಬಿಗೆ ಬೆಂಕಿ ಇಡ್ತಿರುವ ಕಾರ್ಖಾನೆ ಮಾಲೀಕರು.. ರೈತರ ಲಾಭಕ್ಕೂ ಕೊಳ್ಳಿ! factory-owner-burns-the-cane](https://etvbharatimages.akamaized.net/etvbharat/prod-images/768-512-5955344-thumbnail-3x2-cane.jpg)
ಕಬ್ಬು ಬೆಳೆ
ಬೆಳೆದು ನಿಂತ ಕಬ್ಬನ್ನು ಸುಟ್ಟು ಕಡಿಯಲು ಮುಂದಾದ ಕಾರ್ಖಾನೆ ಮಾಲೀಕರು..
ಲಾಭದಾಯಕ ಮತ್ತು ಕೂಲಿ ಕಾರ್ಮಿಕರ ಕಡಿಮೆ ಬಳಕೆಯ ಉದ್ದೇಶದಿಂದ ಕಾರ್ಖಾನೆ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಈ ರೀತಿ ಕಬ್ಬು ಕಟಾವು ಮಾಡುವುದರಿಂದ ಕಾರ್ಮಿಕರಿಗೆ ಸುಟ್ಟ ಬೂದಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ರೈತರು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ.