ಕರ್ನಾಟಕ

karnataka

ETV Bharat / city

ಕಳ್ಳಭಟ್ಟಿ ದಂಧೆಕೋರರ ಮೇಲೂ ಕಣ್ಣಿಡಲಿದೆ ಡ್ರೋನ್​

ಮದ್ಯ ಸಿಗದೆ ಮದ್ಯ ವ್ಯಸನಿಗಳು ಬಟ್ಟಿ ಸರಾಯಿಯ ಬೆನ್ನತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಳ್ಳಭಟ್ಟ ತಯಾರಿಕಾ ಅಡ್ಡೆಗಳ ಪ್ರಮಾಣ ಹೆಚ್ಚಾಗುತ್ತಿದ್ದು ದಂಧೆಕೋರರ ಸಂಚು ಭೇದಿಸಲು ಅಬಕಾರಿ ಇಲಾಖೆ ಪೊಲೀಸರು ಡ್ರೋನ್​ ಕ್ಯಾಮರಾ ಬಳಸುತ್ತಿದ್ದಾರೆ.

excise-department-using-drone-camera
ಅಬಕಾರಿ ಪೊಲೀಸ್

By

Published : Apr 26, 2020, 2:08 PM IST

ಚಿಕ್ಕೋಡಿ: ಲಾಕ್​ಡೌನ್​ ಹಿನ್ನೆಲೆ ಸಂಪೂರ್ಣವಾಗಿ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಮದ್ಯ ವ್ಯಸನಿಗಳು ಕಳ್ಳಭಟ್ಟಿಯ ಹಾದಿ ಹಿಡಿದಿದ್ದಾರೆ. ಹೀಗಾಗಿ ಕಳ್ಳಭಟ್ಟಿ ದಂಧೆಕೋರರ ಸೆದೆಬಡಿಯಲು ಅಬಕಾರಿ ಪೊಲೀಸರು ಡ್ರೋನ್​ ಕ್ಯಾಮರಾ ಮೊರೆ ಹೋಗಿದ್ದಾರೆ.

ಡ್ರೋನ್ ಕ್ಯಾಮರಾ ಬಳಕೆಯಿಂದ ಗುಡ್ಡಗಾಡು ಪ್ರದೇಶ, ನದಿ ದಡದ ಪ್ರದೇಶ ಸೇರಿದಂತೆ ಕೆಲ ಸೂಕ್ಷ್ಮ ಪ್ರದೇಶಗಳ ಮೇಲೂ ಹದ್ದಿನ ಕಣ್ಣಿಡಲು ಸಹಾಯವಾಗಲಿದೆ. ಅಷ್ಟೇ ಅಲ್ಲದೇ ದಂಧೆಕೋರರ ರಸ್ತೆ ಮಾರ್ಗ, ಅವರ ಚಲನವಲಗಳ ಮೇಲೆ ದೃಷ್ಟಿ ಹಾಯಿಸಲು ಸಾಕಷ್ಟು ಅನುಕೂಲವಾಗಲಿದೆ.

ಕಳ್ಳಭಟ್ಟಿ ದಂಧೆಕೋರರ ಮೇಲೆ ಅಬಕಾರಿ ಪೊಲೀಸರ 'ಹದ್ದಿನ ಕಣ್ಣು'

ಚಿಕ್ಕೋಡಿ ಉಪವಿಭಾಗದ ರಾಯಬಾಗ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ತಾಲೂಕಿನ ಗುಡ್ಡಗಾಡು ಪ್ರದೇಶ ಹಾಗೂ ನದಿ ದಡದಲ್ಲಿ ಕಳ್ಳಭಟ್ಟಿ ತಯಾರಿಕೆ ಅಡ್ಡೆಗಳು ಹೆಚ್ಚಾಗುತ್ತಿವೆ. ಡ್ರೋನ್ ಕ್ಯಾಮರಾ ನೀಡುವ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ ಅಂತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಇನ್ನು, ಜಿಲ್ಲಾದ್ಯಂತ ಈಗಾಗಲೇ 530 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, 63 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 34 ಆರೋಪಿಗಳನ್ನು ಬಂಧಿಸಲಾಗಿದೆ. ಸುಮಾರು 74 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ, ಕಳ್ಳಭಟ್ಟಿ ಸಾರಾಯಿ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ‌.

ABOUT THE AUTHOR

...view details