ಚಿಕ್ಕೋಡಿ: ಸ್ವಪಕ್ಷದ ವಿರುದ್ಧ ಹರಿಹಾಯ್ದ ಅಥಣಿ ಕ್ಷೇತ್ರದ ಮಾಜಿ ಶಾಸಕ ಶಹಜಾನ ಡೊಂಗರಗಾಂವ ಅವರು, 'ಮೈನಾರಿಟಿ ಆಗಿರುವ ಕಾರಣ ಟಿಕೆಟ್ ನೀಡಲು ಕಾಂಗ್ರೆಸ್ ಹಿಂದೇಟು ಹಾಕಿದೆ' ಎಂದು ಆರೋಪಿಸಿದ್ದಾರೆ.
ಬೆಳಗಾವಿಯ ಅಥಣಿಯಲ್ಲಿ ಮಾತನಾಡಿದ ಅವರು, ಅಥಣಿಯಲ್ಲಿ ಲಿಂಗಾಯತ ಪ್ರಾಬಲ್ಯದ ಹಿನ್ನೆಲೆಯಲ್ಲಿ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿದೆ ಎಂದರು.
ಕಾಂಗ್ರೆಸ್ನ ಮಾಜಿ ಶಾಸಕ ಶಹಜಾನ ಡೊಂಗರಗಾಂವ ಸ್ವಪಕ್ಷದ ವಿರುದ್ಧ ಹರಿಹಾಯ್ದರು
ಕಾಂಗ್ರೆಸ್ನ ಜಾತಿವಾರು ಲೆಕ್ಕಾಚಾರ ಖಂಡಿಸಿದ ಡೋಂಗರಗಾಂವ ಅವರು, ಮಹೇಶ ಕುಮಠಳ್ಳಿ ಕಾಂಗ್ರೆಸ್ನಿಂದ ಕಾಲು ಹೊರಗಿಟ್ಟಾಗ ನಾನು ಪಕ್ಷ ಉಳಿಸಿದ್ದೇನೆ. ಆದರೆ ಈಗ 'ಮೈನಾರಿಟಿ, ಲಿಂಗಾಯತ ಮತ್ತು ರೊಕ್ಕಾ' ಎಂದು ಮಾತನಾಡಿದರೇ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸೋಲುವುದಕ್ಕೆ ನಾವು ಹುಚ್ಚರಲ್ಲ. ಅದಕ್ಕೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಅವರು ಟಿಕೆಟ್ ನೀಡಲಿ, ನೀಡದಿದ್ದರೂ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ದೇನೆ ಎಂದರು.