ಕರ್ನಾಟಕ

karnataka

ETV Bharat / city

ಕುಡಚಿಯಲ್ಲಿ ನಾಲ್ವರಿಗೆ ಕೊರೊನಾ: ತುರ್ತು ಸಭೆ ನಡೆಸಿದ ಸಚಿವ ಶೆಟ್ಟರ್​​​ - emergency meeting held by Jagadish shettar

ಜಿಲ್ಲೆಯಲ್ಲಿ ಕೊರೊನಾ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ತುರ್ತು ಸಭೆ ನಡೆಸಿದರು.

emergency meeting held by minister jagadish shettar
ತುರ್ತು ಸಭೆ ನಡೆಸಿದ ಸಚಿವ ಜಗದೀಶ್​​ ಶೆಟ್ಟರ್​​

By

Published : Apr 7, 2020, 6:53 PM IST

ಚಿಕ್ಕೋಡಿ: ರಾಯಬಾಗ ತಾಲೂಕಿನ‌ ಕುಡಚಿ ಪಟ್ಟಣದಲ್ಲಿ ಕೊರೊನಾ ವೈರಸ್​ ಸೋಂಕು ನಾಲ್ವರಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್​​ ಲೋಕೋಪಯೋಗಿ ಭವನದಲ್ಲಿ ಅಧಿಕಾರಿ‌ಗಳೊಂದಿಗೆ ತುರ್ತು ಸಭೆ ನಡೆಸಿದರು.

ಸಚಿವರಾದ ಶಶಿಕಲಾ‌ ಜೊಲ್ಲೆ, ಶ್ರೀಮಂತ ಪಾಟೀಲ್​​, ಶಾಸಕರಾದ ಮಹೇಶ ಕುಮಟಳ್ಳಿ, ಪಿ.ರಾಜೀವ್​​​, ದುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಎಂಎಲ್​​​ಸಿ ಮಹಾಂತೇಶ ಕವಟಗಿಮಠ ಈ ಸಭೆಯಲ್ಲಿ ಭಾಗಿಯಾಗಿದ್ದರು.

ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಎಸ್​.ಪಿ.ಲಕ್ಷ್ಮಣ ನಿಂಬರಗಿ, ಸಿಇಒ ಕೆ.ವಿ.ರಾಜೇಂದ್ರ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಮಾಧ್ಯಮದವರನ್ನು ಹೊರತುಪಡಿಸಿ ಸಭೆ ನಡೆಸಲಾಯಿತು.

ABOUT THE AUTHOR

...view details