ಗೋಕಾಕ್:ಈದ್ ಮಿಲಾದ್ ನಿಮಿತ್ತವಾಗಿ ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದನಗರದ ನಿರಾಶ್ರಿತರ ಕೇಂದ್ರದಲ್ಲಿರುವ ಜನರಿಗೆ ಹಣ್ಣು ಹಂಪಲು ವಿತರಿಸಲಾಯಿತು.
ದಯವೇ ಧರ್ಮದ ಮೂಲ: ಹಣ್ಣುಹಂಪಲು ವಿತರಿಸಿ ಗೋಕಾಕ್ನಲ್ಲಿ ಈದ್ ಮಿಲಾದ್ ಆಚರಣೆ - ಗೋಕಾಕ್ನಲ್ಲಿ ಈದ್ ಮಿಲಾದ್ ಆಚರಣೆ ಸುದ್ದಿ
ಈದ್ ಮಿಲಾದ್ ನಿಮಿತ್ತವಾಗಿ ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ಹಣ್ಣು ಹಂಪಲನ್ನು ವಿತರಣೆ ಮಾಡಿ ಗೋಕಾಕ್ನಲ್ಲಿ ಹಬ್ಬ ಆಚರಿಸಲಾಯಿತು.
ಈದ್ ಮಿಲಾದ್
ಈ ವೇಳೆ ಮಾತನಾಡಿದ ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ್, ಎಲ್ಲರನ್ನೂ ಗೌರವ ಮತ್ತು ಪ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ. ಕಷ್ಟ ಬಂದಾಗ ದೇವರನ್ನು ನೆನೆಯಲು ಎಲ್ಲರೂ ಮೇಲೆ ನೋಡುತ್ತೇವೆಯೇ ವಿನಹಃ ಅಕ್ಕಪಕ್ಕವಲ್ಲ. ಇದರರ್ಥ ದೇವರು ಒಬ್ಬನೇ ಇದ್ದಾನೆ ಎಂಬುದು. ಈ ಸತ್ಯವನ್ನು ಅರಿತು ನಾವು ಬಾಳಿ ಬದುಕ ಬೇಕಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆ, ಉಪ ಕಾರಾಗೃಹ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿದ ಮುಸ್ಲಿಂ ಬಾಂಧವರು ರೋಗಿಗಳಿಗೆ, ವಿಚಾರಣಾಧೀನ ಖೈದಿಗಳಿಗೆ ಮತ್ತು ಮಕ್ಕಳಿಗೆ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿ ಮಾನವೀಯತೆ ಮೆರೆದರು.