ಕರ್ನಾಟಕ

karnataka

ETV Bharat / city

ಮಳೆ ಮಧ್ಯೆ ಭೂಕಂಪನ.. ಬೆಚ್ಚಿಬಿದ್ದ ಅಥಣಿ ಜನ - ಬೆಳಗಾವಿಯ ಶಿರಹಟ್ಟಿ ತಾಲೂಕಿನಲ್ಲಿ ಭೂಕಂಪನ

ರಾಜ್ಯದ ಕೆಲವೆಡೆ ಮಳೆ ಮಧ್ಯೆ ಭೂಕಂಪನ- ರಿಕ್ಟರ್​ 3.0 ತೀವ್ರತೆ ದಾಖಲು- ಬೆಚ್ಚಿಬಿದ್ದ ಬೆಳಗಾವಿ ಮಂದಿ

Athani Tehsildar Suresh Munje visited the village
ಗ್ರಾಮಕ್ಕೆ ಅಥಣಿ ತಹಶೀಲ್ದಾರ್ ಸುರೇಶ್ ಮುಂಜೇ ಗ್ರಾಮಸ್ಥರಿಗೆ ಧೈರ್ಯ ಹೇಳಿದರು.

By

Published : Jul 9, 2022, 12:27 PM IST

ಅಥಣಿ(ಬೆಳಗಾವಿ):ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಮುಂಜಾನೆ 6.20ಕ್ಕೆ ಭೂಕಂಪನ ಆಗಿದೆ. ಗ್ರಾಮಸ್ಥರ ಗಮನಕ್ಕೆ ಬರುತ್ತಿದ್ದಂತೆ ಅಥಣಿ ತಾಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಗ್ರಾಮಕ್ಕೆ ಅಥಣಿ ತಹಶೀಲ್ದಾರ್ ಸುರೇಶ್ ಮುಂಜೆ ಹಾಗೂ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿದರು.

ಭೂಕಂಪನದಿಂದ ಹಾನಿ ಸಂಭವಿಸಿದ ಮನೆಗಳನ್ನು ತಹಶೀಲ್ದಾರ್ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಜೊತೆ ಮಾತನಾಡಿ, ರಿಕ್ಟರ್ 3.0 ತೀವ್ರತೆ ದಾಖಲಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ, ಕೆಲವು ಮನೆಗಳು ಬಿರುಕು ಬಿಟ್ಟಿವೆ ಎಂದು ಹೇಳುತ್ತಿದ್ದಾರೆ. ಆ ಬಿರುಕು ಬಿಟ್ಟ ಮನೆಗಳು ಹಳೆ ಬಿರುಕುಗಳು ಎಂದು ತಿಳಿದು ಬಂದಿದೆ. ಗ್ರಾಮಸ್ಥರು ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.

ಇಂದು ಬೆಳ್ಳಂಬೆಳಗ್ಗೆ, ವಿಜಯಪುರ, ಬಾಗಲಕೋಟೆ ಮತ್ತು ಮಹಾರಾಷ್ಟ್ರದಲ್ಲೂ ಭೂಕಂಪನ ಸಂಭವಿಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

ಇದನ್ನೂ ಓದಿ :ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೂಕಂಪನ: ಬೆಚ್ಚಿಬಿದ್ದ ಜನ

ABOUT THE AUTHOR

...view details