ಬೆಳಗಾವಿ: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿಕೊಂಡು ಬೆಳಗಾವಿಗೆ ಬಂದ ಗೋವಾ ಸರ್ಕಾರಿ ಬಸ್ ಚಾಲಕನಿಗೆ ಪ್ರಯಾಣಿಕರೇ ಗೂಸಾ ಕೊಟ್ಟ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಿಕ್ ಇರಲಿ ಅಂತ ಗೋವಾದಿಂದ ಬೆಳಗಾವಿಗೆ ಎಣ್ಣೆ ಏಟಲ್ಲೇ ಬಂದ ಸರ್ಕಾರಿ ಬಸ್ ಚಾಲಕನಿಗೆ ಗೂಸಾ!! - ಕುಡುಕ ಗೋವಾ ಸರ್ಕಾರಿ ಬಸ್ ಚಾಲಕನ ಅವಾಂತರ
ಗೋವಾ ಸರ್ಕಾರಿ ಬಸ್ ಚಾಲಕನೊರ್ವ ಕುಡಿದ ಮತ್ತಿನಲ್ಲಿ 51 ಜನ ಪ್ರಯಾಣಿಕರು ಇದ್ದ ಬಸ್ನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬೆಳಗಾವಿಗೆ ಬಂದ ಘಟನೆ ನಡೆದಿದೆ. ನಿಷೆಯಲ್ಲಿದ್ದ ಚಾಲಕನಿಗೆ ಪ್ರಯಾಣಿಕರೆ ಗೂಸಾ ನೀಡಿದ್ದಾರೆ.
![ಕಿಕ್ ಇರಲಿ ಅಂತ ಗೋವಾದಿಂದ ಬೆಳಗಾವಿಗೆ ಎಣ್ಣೆ ಏಟಲ್ಲೇ ಬಂದ ಸರ್ಕಾರಿ ಬಸ್ ಚಾಲಕನಿಗೆ ಗೂಸಾ!! drunken-goa-government-bus-driver-beaten-in-belagavi](https://etvbharatimages.akamaized.net/etvbharat/prod-images/768-512-9011604-thumbnail-3x2-corona.jpg)
ಗೋವಾ ಸರ್ಕಾರಿ ಬಸ್ ಚಾಲಕ
ಕುಡಿದ ಮತ್ತಿನಲ್ಲೇ ಬಸ್ ಚಲಾಯಿಸಿಕೊಂಡ ಬಂದ ಗೋವಾ ಸರ್ಕಾರಿ ಬಸ್ ಚಾಲಕನಿಗೆ ಬೆಳಗಾವಿಯಲ್ಲಿ ಗೂಸಾ..!
ಗೋವಾ ಸರ್ಕಾರಿ ಬಸ್ ಚಾಲಕ ಎಸ್. ಕಂದಬ ಎಂಬಾತ ಈ ಅವಾಂತರ ಮಾಡಿದ್ದಾರೆ. ಪಣಜಿಯಿಂದ ಬೆಳಗಾವಿವರೆಗೆ ಕುಡಿದ ಮತ್ತಿನಲ್ಲಿಯೇ ಬಸ್ ಚಾಲನೆ ಮಾಡಿಕೊಂಡು ಬೆಳಗಾವಿಗೆ ಪ್ರಯಾಣಿಕರನ್ನು ತಲುಪಿಸಿದ್ದಾನೆ.
ಚಿಕ್ಕಮಕ್ಕಳು, ವೃದ್ದರೂ ಸೇರಿ 51 ಪ್ರಯಾಣಿಕರು ಈ ಬಸ್‌ನಲ್ಲಿ ಬಂದಿದ್ದರು. ಅಲ್ಲದೇ ಗೋವಾದಿಂದ ಬಂದಿದ್ದ ಪಾರ್ಸಲ್ ಕೊಡಲ್ಲ ಎಂದು ವ್ಯಕ್ತಿಯೊಬ್ಬನ ಜೊತೆಗೂ ಈತ ಕಿರಿಕ್ ಮಾಡಿಕೊಂಡಿದ್ದನು. ಆಕ್ರೋಶಗೊಂಡ ಸ್ಥಳೀಯರು ಚಾಲಕನಿಗೆ ಕಪಾಳಮೋಕ್ಷ ಮಾಡಿದರು.