ಕರ್ನಾಟಕ

karnataka

ETV Bharat / city

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ: ಬೆಳಗಾವಿಯಲ್ಲಿ ಆರೋಪಿ ಅರೆಸ್ಟ್‌ - drugs peddler arrested in belagavi

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 31,875 ರೂ. ಮೌಲ್ಯದ 2 ಕೆ.ಜಿ 125 ಗ್ರಾಂ. ಗಾಂಜಾ ಮತ್ತು ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.

drugs-peddler-arrested-in-belagavi
ಬೆಳಗಾವಿಯಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಪೆಡ್ಲರ್ ಅರೆಸ್ಟ್:

By

Published : Mar 6, 2022, 9:02 AM IST

ಬೆಳಗಾವಿ:ಹುಂಚಾನಟ್ಟಿಯ ಜಯನಗರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿ ನಗರ ಸಿ.ಇ.ಎನ್ ಅಪರಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಚ್ಚೆಯ ಜಯನಗರದ ರಾಹುಲ ಬಸವರಾಜ ಸುತಾರ (20) ಬಂಧಿತ ವ್ಯಕ್ತಿ. ಈತನಿಂದ 31,875 ರೂ. ಮೌಲ್ಯದ 2 ಕೆ.ಜಿ 125 ಗ್ರಾಂ. ಗಾಂಜಾ ಮತ್ತು ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಹುಂಚಾನಟ್ಟಿಯ ಜಯನಗರದ ಬಳಿ ಮಾದಕ ವಸ್ತು ಮಾರಾಟ ಮಾಡುವುದರ ಜೊತೆಗೆ ಬೆಳಗಾವಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ರಷ್ಯಾದಲ್ಲಿ ಹಣಕಾಸು ಸೇವೆ ಸ್ಥಗಿತಗೊಳಿಸಿದ ಅಮೆರಿಕದ ವೀಸಾ, ಮಾಸ್ಟರ್​ಕಾರ್ಡ್

ABOUT THE AUTHOR

...view details