ಬೆಳಗಾವಿ:ಕೈ ಮುಗಿತಿವಿ... ನಾಮಪತ್ರ ಮಾತ್ರ ಹಿಂಪಡೆಯಬೇಡಿ. ಹಾಗೇನಾದರೂ ಮಾಡಿದರೆ ವಿಷ ಕುಡಿತೀವಿ. ಆಗ ನಮ್ಮ ಹೆಣದ ಮೇಲೆ ದಾಟಿ ಹೋಗಿ ಎಂದು ಅಭಿಮಾನಿಗಳು ಬೇಡಿಕೊಂಡ ಪ್ರಸಂಗ ನಡೆಯಿತು.
ಹೀಗೆ ಗೋಗರೆಯುತ್ತಾ ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಕಾರ್ಯಕರ್ತರು ಪರಿಪರಿಯಾಗಿ ಬೇಡಿಕೊಂಡ ಘಟನೆ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಜ್ಞಾನ ಮಂದಿರದಲ್ಲಿ ನಡೆದಿದೆ.
ನಾಮಪತ್ರ ವಾಪಸ್ ಪಡೆಯದಂತೆ ಕಾಲಿಗೆ ಬಿದ್ದ ಅಭಿಮಾನಿ ನಗರದ ಎನ್ಎಸ್ಎಫ್ ಮೈದಾನದಲ್ಲಿ ಸಭೆ ಸೇರಿದ ಬಿಜೆಪಿ ಮುಖಂಡರು, ಅಶೋಕ ಪೂಜಾರಿ ಮನವೊಲಿಕೆಯ ನಿರ್ಧಾರ ಕೈಗೊಂಡರು. ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿಗೆ ಪೂಜಾರಿ ಮನವೊಲಿಸುವ ಜವಾಬ್ದಾರಿ ವಹಿಸಲಾಗಿತ್ತು. ಸಭೆ ಬಳಿಕ ಕತ್ತಿ ನೇರವಾಗಿ ಪೂಜಾರಿ ಮನೆಗೆ ಆಗಮಿಸಿದರು.
ಈ ವಿಷಯ ತಿಳಿದ ಅಭಿಮಾನಿಗಳು ಅಶೋಕ್ ಪೂಜಾರಿ ಅವರನ್ನು ಜ್ಞಾನ ಮಂದಿರದಲ್ಲಿ ಹಿಡಿದಿಟ್ಟುಕೊಂಡರು. ಅಲ್ಲದೆ, ಪೂಜಾರಿಗೆ ಬಿಜೆಪಿ ನಾಯಕರ ಭೇಟಿಗೆ ಅವಕಾಶ ನೀಡಲಿಲ್ಲ. ಬಿಜೆಪಿ ಕುತಂತ್ರಕ್ಕೆ ಬಲಿಯಾಗದಂತೆ ಕಣ್ಣೀರಿಟ್ಟರು. ಅಭಿಮಾನಿಗಳ ರೋದನೆ ಕಂಡು ಪೂಜಾರಿಯೂ ಕಣ್ಣೀರು ಹಾಕಿದರು.