ಬೆಳಗಾವಿ : ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಚಳಿಗಾಲ ಅಧಿವೇಶನಕ್ಕೆ ತೆರೆ ಬಿದ್ದ ಹಿನ್ನೆಲೆ, ದಾಖಲೆ ಪ್ರಮಾಣದಲ್ಲಿ ಕುಂದಾ ಮಾರಾಟವಾಗಿದ್ದು, ಕುಂದಾಗೆ ಭಾರಿ ಡಿಮ್ಯಾಂಡ್ ಬಂದಿದೆ. ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪತ್ರಕರ್ತರು ಬೆಳಗಾವಿ ಸಿಹಿ ಕುಂದಾಗೆ ಫಿದಾ ಆಗಿದ್ದು ಖರೀದಿಸಲು ಮುಗಿಬೀಳುತ್ತಿದ್ದಾರೆ. ಒಬ್ಬೊಬ್ಬರು ಒಂದು ಕೆಜಿಯಿಂದ ನಾಲ್ಕೈದು ಕೆಜಿವರೆಗೆ ಕುಂದಾ ಖರೀದಿಸಿ ತಮ್ಮ ಕುಟುಂಬಸ್ಥರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
Belagavi winter session -2021 : ಕಳೆದ ಡಿ.13ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಚಳಿಗಾಲ ಅಧಿವೇಶನಕ್ಕೆ ಶುಕ್ರವಾರ(ಡಿ.24) ಕೊನೆಯ ದಿನವಾಗಿದ್ದು, ಅಧಿವೇಶನಕ್ಕೆ ಬಂದವರೆಲ್ಲರೂ ಕೈಯಲ್ಲಿ ಕುಂದಾ ಹಿಡಿದುಕೊಂಡು ಹೋಗುತ್ತಿದ್ದಾರೆ. ನಗರದ ಕ್ಯಾಪ್ ಪ್ರದೇಶದಲ್ಲಿ ಪುರೋಹಿತ ಸ್ವೀಟ್ ಮಾರ್ಟ್ ಸೇರಿದಂತೆ ಇತರ ಅಂಗಡಿಗಳಲ್ಲಿ ಪೊಲೀಸರು, ಅಧಿಕಾರಿಗಳು ಅಷ್ಟೇ ಅಲ್ಲದೇ ಶಾಸಕರು ಕೂಡ ಕುಂದಾ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.