ಬೆಳಗಾವಿ: ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕೇವಲ ಹೇಳಿಕೆಗಳಾಗಿ ಉಳಿಯದೆ ಕಾರ್ಯರೂಪಕ್ಕೆ ಬರುವಂತಹ ಪ್ರಯತ್ನ ಆಗಬೇಕು ಎಂದು ಚಿತ್ರನಟಿ ಹಾಗೂ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧಾ ಅಭಿಪ್ರಾಯಪಟ್ಟರು.
ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯ ಕಾರ್ಯರೂಪಕ್ಕೆ ಬರಲಿ : ತಾರಾ - undefined
ಇಲ್ಲಿಯವರೆಗೆ ಹಲವಾರು ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, ಅವುಗಳಲ್ಲಿ ತಗೆದುಕೊಳ್ಳುವ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಸಮ್ಮೇಳನಗಳಲ್ಲಿ ಸಚಿವರು, ಶಾಸಕರನ್ನು ಉದ್ಘಾಟನೆಗೆ ಕರೆಯದೆ ಅವರನ್ನು ಸಮಾರೋಪ ಸಮಾರಂಭಕ್ಕೆ ಕರೆಯಬೇಕು ಎಂದು ಚಲನಚಿತ್ರ ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧಾ ತಿಳಿಸಿದರು.
ಗೋಕಾಕ್ ನಗರದಲ್ಲಿ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಲ್ಲಿಯವರೆಗೆ ಹಲವಾರು ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, ಅವುಗಳಲ್ಲಿ ತಗೆದುಕೊಳ್ಳುವ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಸಮ್ಮೇಳನಗಳಲ್ಲಿ ಸಚಿವರು, ಶಾಸಕರನ್ನು ಉದ್ಘಾಟನೆಗೆ ಕರೆಯದೆ ಅವರನ್ನು ಸಮಾರೋಪ ಸಮಾರಂಭಕ್ಕೆ ಕರೆಯಬೇಕು. ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅವರಿಗೆ ಮುಟ್ಟಿಸಿ ಅನುಷ್ಠಾನ ಮಾಡುವಂತೆ ಒತ್ತಡ ಹೇರಬೇಕು ಎಂದರು.
ಇನ್ನು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೆ ತರಲಾಗಿತ್ತು. ಈ ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು ಸ್ವಾಗತಾರ್ಹ. ಜೊತೆಗೆ ಪ್ರಾದೇಶಿಕ ಭಾಷೆಗಳಿಗೂ ಸ್ಥಾನಮಾನ ನೀಡುವಂತೆ ಆಗಬೇಕು ಎಂದರು.