ಕರ್ನಾಟಕ

karnataka

ETV Bharat / city

65 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಡಿಸಿಎಂ ಸವದಿ ಚಾಲನೆ - ಸತ್ಯ ಸಂಗಮ ಸೇವಾ ಟ್ರಸ್ಟ್

ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಹಸಿವಿನಿಂದ ಯಾರೂ ತತ್ತರಿಸಬಾರದೆಂದು ಅಥಣಿ ತಾಲೂಕಿನ 65 ಸಾವಿರ ಕುಟುಂಬಗಳಿಗೆ ನಮ್ಮ ಕುಟುಂಬದ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

belagavi
ಆಹಾರದ ಕಿಟ್ ವಿತರಣೆಗೆ ಡಿಸಿಎಂ ಸವದಿ ಚಾಲನೆ

By

Published : May 27, 2021, 1:01 PM IST

Updated : May 27, 2021, 2:21 PM IST

ಅಥಣಿ (ಬೆಳಗಾವಿ): ಕೊರೊನಾ ಅಬ್ಬರದಿಂದಾಗಿ ಜನಸಾಮಾನ್ಯರು ಹಸಿವಿನಿಂದ ಬಳಲುಬಾರದೆಂದು ನಮ್ಮ ಕುಟುಂಬದ ವತಿಯಿಂದ ಅಳಿಲು ಸೇವೆಯಾಗಿ ತಾಲೂಕಿನ ಪ್ರತಿ ಕುಟುಂಬಕ್ಕೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

65 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಡಿಸಿಎಂ ಸವದಿ ಚಾಲನೆ

ಅಥಣಿ ಪಟ್ಟಣದ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿ ಬಳಿಕ ಮಾತನಾಡಿದರು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಹಸಿವಿನಿಂದ ಯಾರೂ ತತ್ತರಿಸಬಾರದೆಂದು ಅಥಣಿ ತಾಲೂಕಿನ 65 ಸಾವಿರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುತ್ತಿದ್ದೇವೆ. ಮೂರು ದಿನಗಳ ಕಾಲ ಪಟ್ಟಣದಲ್ಲಿ ಸತ್ಯ ಸಂಗಮ ಸೇವಾ ಟ್ರಸ್ಟ್​ ವತಿಯಿಂದ ವಿತರಣೆ ಮಾಡಲಾಗುವುದು. ನಂತರ ಗ್ರಾಮೀಣ ಭಾಗದಲ್ಲಿಯೂ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುವುದೆಂದು ಹೇಳಿದರು.

ಸಮಾಜ ಸಂಕಷ್ಟ ಸಮಯದಲ್ಲಿರುವಾಗ ನಮ್ಮ ಕುಟುಂಬದ ವತಿಯಿಂದ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕಿದೆ. ಕಳೆದ ಬಾರಿ ಅಥಣಿ ಪಟ್ಟಣದಲ್ಲಿ 15 ಸಾವಿರ ಕಿಟ್ ವಿತರಣೆ ಮಾಡಲಾಗಿತ್ತು. ಸದ್ಯ ಅಥಣಿ ತಾಲೂಕಿನ 65 ಸಾವಿರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುವುದು ಎಂದರು.

ಓದಿ:ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದ್ರು ಅಂದ್ರೆ ಅವರಿಗೆ ಉತ್ತರ ಕೊಟ್ಟು ಕಳಿಸಿದ್ದಾರಲ್ಲ: ಸಿಎಂ ಬಿಎಸ್​ವೈ

Last Updated : May 27, 2021, 2:21 PM IST

ABOUT THE AUTHOR

...view details