ಕರ್ನಾಟಕ

karnataka

ETV Bharat / city

ಡಿಸಿಸಿ ಬ್ಯಾಂಕ್ ‌ನಿರ್ದೇಶಕನ‌ ಪತ್ನಿ ಆತ್ಮಹತ್ಯೆ - ಬೆಳಗಾವಿ ಡಿಸಿಸಿ ಬ್ಯಾಂಕ್ ‌ನಿರ್ದೇಶಕನ‌ ಪತ್ನಿ ಆತ್ಮಹತ್ಯೆ

ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಪತ್ನಿ ಶ್ರುತಿ ಕಪ್ಪಲಗುದ್ದಿ (29) ಮೃತ ಗೃಹಿಣಿ. ಜಿಲ್ಲೆಯ ಗೋಕಾಕ ‌ತಾಲೂಕಿನ ಕಲ್ಲೋಳಿ ಗ್ರಾಮದ ಮನೆಯಲ್ಲಿ ಶ್ರುತಿ ನೇಣಿಗೆ ಶರಣಾಗಿದ್ದಾರೆ.

DCC bank director wife death suicide
ಆತ್ಮಹತ್ಯೆ

By

Published : Jan 30, 2021, 7:02 PM IST

ಬೆಳಗಾವಿ:ಡಿಸಿಸಿ ಬ್ಯಾಂಕ್​​ನ ನಿರ್ದೇಶಕರೊಬ್ಬರ ಪತ್ನಿ ಫ್ಯಾನ್‌ಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಪತ್ನಿ ಶ್ರುತಿ ಕಪ್ಪಲಗುದ್ದಿ (29) ಮೃತ ಗೃಹಿಣಿ. ಜಿಲ್ಲೆಯ ಗೋಕಾಕ ‌ತಾಲೂಕಿನ ಕಲ್ಲೋಳಿ ಗ್ರಾಮದ ಮನೆಯಲ್ಲಿ ಶ್ರುತಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಓದಿ-ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆದ ವಿದ್ಯಾರ್ಥಿನಿ!

ಫ್ಯಾನ್‌ಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ 'ಪ್ಲೀಸ್ ಟೇಕ್ ಕೇರ್ ಆಫ್ ಮೈ ಡಾಟರ್' ಎಂದು ತಮ್ಮ ತಂದೆಗೆ ವಾಟ್ಸಪ್ ಮೆಸೇಜ್ ಮಾಡಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details