ಕರ್ನಾಟಕ

karnataka

ETV Bharat / city

ಬೆಳಗಾವಿಯ ಕೋವಿಡ್ ವಾರ್ಡ್​ನಲ್ಲಿ ಅವ್ಯವಸ್ಥೆ ಆರೋಪ; ಸೋಂಕಿತರಿಂದ ಪ್ರತಿಭಟನೆ - ಬೆಳಗಾವಿ ಸುದ್ದಿ

ಬೆಳಗಾವಿ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಕೋವಿಡ್ ವಾರ್ಡ್‌ ಅವ್ಯವಸ್ಥೆಯ ಆಗರವಾಗಿದೆ ಎಂದು ಸೋಂಕಿತರು ಆರೋಪಿಸಿದ್ದಾರೆ. ಊಟ ಹಾಗೂ ಬೆಡ್ ವ್ಯವಸ್ಥೆ ಸರಿ ಇಲ್ಲವೆಂದು 10ಕ್ಕೂ ಅಧಿಕ ಸೋಂಕಿತರು ಧರಣಿ ನಡೆಸಿದ್ದಾರೆ.

Covid patients protest in Belagavi
ಸೋಂಕಿತರಿಂದ ಪ್ರತಿಭಟನೆ

By

Published : Jun 10, 2020, 12:32 PM IST

ಬೆಳಗಾವಿ:ಇಲ್ಲಿನ ಕೋವಿಡ್ ವಾರ್ಡ್​ನಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ‌ ಆಗ್ರಹಿಸಿ ಕೊರೊನಾ ‌ಸೋಂಕಿತರು ಇಂದು ಪ್ರತಿಭಟನೆ ನಡೆಸಿದರು.

ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಕೋವಿಡ್ ವಾರ್ಡ್‌ನಲ್ಲಿ ಅವ್ಯವಸ್ಥೆಗಳಿವೆ ಎಂದು ಸೋಂಕಿತರು ಆರೋಪಿಸಿದ್ದಾರೆ. ಊಟ ಹಾಗೂ ಬೆಡ್ ವ್ಯವಸ್ಥೆ ಸರಿ ಇಲ್ಲವೆಂದು 10ಕ್ಕೂ ಅಧಿಕ ಸೋಂಕಿತರು ಧರಣಿ ನಡೆಸಿದ್ದಾರೆ. 6 ದಿನಗಳಿಂದ ಕೊರೊನಾ ವರದಿಗಾಗಿ ಸೋಂಕಿತರು ಕಾಯುತ್ತಿದ್ದಾರೆ. 2ನೇ ವರದಿ ನಿರೀಕ್ಷೆಯಲ್ಲಿ 20ಕ್ಕೂ ಹೆಚ್ಚು ಸೋಂಕಿತರಿದ್ದಾರೆ. 3 ದಿನಗಳಲ್ಲಿ ಬರಬೇಕಿದ್ದ 2ನೇ ವರದಿ 6 ದಿನ ಕಳೆದರೂ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್​ ವಾರ್ಡ್​ನಲ್ಲಿ ಕೊರೊನಾ ಸೋಂಕಿತರ ಪ್ರತಿಭಟನೆ

ನಿನ್ನೆ ಕೂಡ ಸೋಂಕಿತರು ಸೇವಿಸುವ ಉಪಹಾರದಲ್ಲಿ ಇರುವೆ, ಜಿರಳೆಗಳು ಕಂಡು ಬಂದಿದ್ದವು. ಈ ಅವ್ಯವಸ್ಥೆ ಸರಿಪಡಿಸಿ ಗುಣಮಟ್ಟದ ‌ಆಹಾರ ನೀಡುವಂತೆ ಸೋಂಕಿತರು ಆಗ್ರಹಿಸಿದ್ದಾರೆ.

ABOUT THE AUTHOR

...view details