ಬೆಳಗಾವಿ: ಲೋಕಸಭೆ ಉಪಚುನಾವಣೆಯ ಮತ ಏಣಿಕೆ ಮೇ 2 ಕ್ಕೆ ನಡೆಯಲಿದ್ದು, ಮತ ಏಣಿಕೆಯ ವರದಿಗೆ ತೆರಳುವ ಬೆಳಗಾವಿ ಪತ್ರಕರ್ತರಿಗೆ ಇಂದು ಕೋವಿಡ್ ಟೆಸ್ಟ್ ಮಾಡಲಾಯಿತು.
ಉಪ ಚುನಾವಣೆ ಮತ ಎಣಿಕೆ ವರದಿಗೆ ತೆರಳಲಿರುವ ಬೆಳಗಾವಿ ಪತ್ರಕರ್ತರಿಗೆ ಕೋವಿಡ್ ಟೆಸ್ಟ್
ಮತ ಎಣಿಕೆ ಕೇಂದ್ರಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿ, ಏಜೆಂಟರ್ ಹಾಗೂ ಚುನಾವಣೆ ಆಯೋಗದಿಂದ ಮತ ಏಣಿಕೆ ಪಾಸ್ ಪಡೆದ ಪತ್ರಕರ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಚುನಾವಣೆ ಆಯೋಗ ನಿರ್ದೇಶನ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ವಾರ್ತಾ ಇಲಾಖೆಯಲ್ಲಿ ಪತ್ರಕರ್ತರಿಗೆ ಆರ್.ಟಿಪಿಸಿಆರ್ ಟೆಸ್ಟ್ ಮಾಡಲಾಯಿತು. ಮತ ಎಣಿಕೆ ಕೇಂದ್ರಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿ, ಏಜೆಂಟರ್ ಹಾಗೂ ಚುನಾವಣೆ ಆಯೋಗದಿಂದ ಮತ ಏಣಿಕೆ ಪಾಸ್ ಪಡೆದ ಪತ್ರಕರ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಚುನಾವಣೆ ಆಯೋಗ ನಿರ್ದೇಶನ ನೀಡಿದೆ.
ಇಲ್ಲವೇ ಕೊರೊನಾ ಲಸಿಕೆ ಎರಡೂ ಡೋಸ್ ಪಡೆದಿರಬೇಕು. ಅಂತವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಬೇಕು ಎಂದು ಆಯೋಗ ಸೂಚಿಸಿದೆ. ಹೀಗಾಗಿ ಎಲ್ಲ ಪತ್ರಕರ್ತರಿಗೆ ಇಂದು ಕೋವಿಡ್ ಟೆಸ್ಟ್ ಮಾಡಲಾಯಿತು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.