ಕರ್ನಾಟಕ

karnataka

ETV Bharat / city

ಕೋಟ ಶ್ರೀನಿವಾಸ ಪೂಜಾರಿ ಗೆಲುವು ಚಿಂತಕರ ಚಾವಡಿಗೆ ಮೆರುಗು: ಪರಿಷತ್‌ನಲ್ಲಿ ಪಕ್ಷಾತೀತವಾಗಿ ಅಭಿನಂದನೆ! - ವಿಧಾನ ಪರಿಷತ್‌ ಕಲಾಪ

ವಿಧಾನ ಪರಿಷತ್‌ ಚುನಾವಣೆ ಗೆದ್ದಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕಲಾಪದಲ್ಲಿಂದು ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಲಾಗಿದ್ದು, ಕೋಟ ಅವರು ಗೆಲುವು ಪರಿಷತ್‌ಗೆ ಘನತೆ, ಗೌರವ ಬಂದಿದೆ ಎಂದು ಕೊಂಡಾಡಿದ್ದಾರೆ.

Council members wishing to Kota srinivasa poojari in council session
ಕೋಟ ಶ್ರೀನಿವಾಸ ಪೂಜಾರಿ ಗೆಲುವು ಚಿಂತಕರ ಚಾವಡಿಗೆ ಮೆರುಗು; ಪರಿಷತ್‌ನಲ್ಲಿ ಪಕ್ಷಾತೀತವಾಗಿ ಅಭಿನಂದನೆ!

By

Published : Dec 15, 2021, 3:16 PM IST

Updated : Dec 15, 2021, 7:00 PM IST

ಬೆಂಗಳೂರು: ಪರಿಷತ್‌ಗೆ ಮರು ಆಯ್ಕೆಯಾದ ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಪಕ್ಷಾತೀತವಾಗಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದು, ಚಿಂತಕರ ಚಾವಡಿಯಾದ ಪರಿಷತ್ ಕುಬೇರರ ಮನೆಯಾಗುತ್ತಿದೆ ಎನ್ನುವ ಅಪವಾದ ಬರುತ್ತಿರುವ ವೇಳೆ ಕೋಟ ಅವರಂತಹ ವ್ಯಕ್ತಿ ಗೆದ್ದು ಸದನದ ಗೌರವ ಕಾಪಾಡುತ್ತಿರುವುದು ಒಳ್ಳೆಯ ಸಂಗತಿ ಎಂದು ಬಣ್ಣಿಸಲಾಯಿತು.

ಕೋಟ ಶ್ರೀನಿವಾಸ ಪೂಜಾರಿ ಗೆಲುವು ಚಿಂತಕರ ಚಾವಡಿಗೆ ಮೆರುಗು: ಪರಿಷತ್‌ನಲ್ಲಿ ಪಕ್ಷಾತೀತವಾಗಿ ಅಭಿನಂದನೆ

ವಿಧಾನ ಪರಿಷತ್ ಕಲಾಪದ ಶೂನ್ಯವೇಳೆ ಬಳಿಕ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಎಸ್.ಆರ್‌.ಪಾಟೀಲ್, ಇಂದು ಮೇಲ್ಮನೆಯನ್ನು ಚಿಂತಕರ ಚಾವಡಿ ಎನ್ನುವ ಬದಲು ಕುಬೇರರ ಮನೆ ಎನ್ನುವಂತಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇಂತಹ ಸಂದರ್ಭದಲ್ಲಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಒಂದು ರೂ. ಖರ್ಚು ಮಾಡದೆ ಆಯ್ಕೆ ಆಗುತ್ತಿದ್ದಾರೆ ಅವರಿಗೆ ಅಭಿನಂದನೆ, ಚಿಂತರಕರ ಚಾವಡಿಗೆ ಕೋಟ ಮೆರಗು ತಂದಿದ್ದಾರೆ. ಇದೇ ಮಾದರಿಯಲ್ಲಿ ಪರಿಷತ್ ಚುನಾವಣೆ ಎಲ್ಲ ಕಡೆ ಆಗಲಿ ಎಂದು ಅಪೇಕ್ಷೆ ಪಡುತ್ತೇನೆ, ಎಲ್ಲ ಸದಸ್ಯರು ಅವರನ್ನು ಅನುಕರಣೆ ಮಾಡಲಿ ಎಂದು ಸಲಹೆ ನೀಡಿದರು.

'ಕೋಟ ಅವರ ಆಯ್ಕೆಯಿಂದ ಸದನಕ್ಕೆ ಘಟತೆ, ಗೌರವ'

ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿ ಅವರದ್ದು ಹೋರಾಟದ ಬದುಕು, ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ , ಫೋಟೋಗ್ರಾಫರ್ ಆಗಿದ್ದರು, ಕೋಟ ಹಾಗೂ ಪ್ರತಾಪ್ ಚಂದ್ರ ಶೆಟ್ಟಿ ಇಬ್ಬರೂ ಮೂರು ಕಾಸಿಲ್ಲದೆ ಗೆದ್ದು ತೋರಿಸಿದ್ದವರು.

ಮಾದರಿಯಾಗಿ ಕೋಟ ನಮ್ಮ ಮುಂದಿದ್ದಾರೆ, ಓದಿದ್ದು ಕಡಿಮೆ ಆದರೆ ಅವರ ಮಾತು ಉತ್ತಮವಾಗಿದೆ. ಸದನಕ್ಕೆ ಘನತೆ ಗೌರವ ತಂದುಕೊಟ್ಟಿದ್ದಾರೆ. ಬಹಳ ಕಡಿಮೆ ವೆಚ್ಚದಲ್ಲಿ ಅವರು ಆಯ್ಕೆಯಾಗಿದ್ದಾರೆ. ಹಾಗಾಗಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬಿಜೆಪಿಯ ಪುಟ್ಟಣ್ಣ ಮಾತನಾಡಿ, ನಮಗೆ ಮಾನಸಿಕವಾಗಿ ನೋವಾಗಿದೆ. ಎಸ್.ಆರ್.ಪಾಟೀಲ್ ಸದನದಲ್ಲಿ ಮುಂದುವರೆಯಬೇಕು, ಕೋಟ ಶ್ರೀನಿವಾಸ ಪೂಜಾರಿ ರೀತಿ ಪ್ರತಿಪಕ್ಷ ನಾಯಕ ಪಾಟೀಲ್ ಕೂಡ ಸರಳ ರೀತಿ ಇದ್ದವರು, ನಿಮ್ಮಂತರವು ಸದನಕ್ಕೆ ಬರಬೇಕು, ಮತ್ತೊಮ್ಮೆ ಬರಲಿ ಎನ್ನುವ ಆಶಯ ನನ್ನದು ಎಂದರು.

'ಎಸ್.ಆರ್. ಪಾಟೀಲ್‌ಗೆ ಕಾಂಗ್ರೆಸ್‌ ಸೂಕ್ತ ಗೌರವ ಕೊಡುತ್ತೆ':

ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಮಾತನಾಡಿ, ಹೊರಗಡೆ ಚಿಂತಕರ ಚಾವಡಿ ಹೋಗಿ ಕುಬೇರರ ಚಾವಡಿ ಆಗಿದೆ. ಇದರ ಬಗ್ಗೆ ಹಂಸಲೇಖರ ಒಂದು ಮಾತು ನೆನಪಾಗುತ್ತಿದೆ, ಮೇಲ್ಮನೆ ಕೆಳಮನೆಯಾಗಿದೆ, ಕೆಳಮನೆ ನೆಲಮನೆ ಆಗಿದೆ. ಅದನ್ನು ನಾವೆಲ್ಲಾ ಅವಲೋಕನ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಒಂದು ನಿಯಮವಿದೆ. ನಾಲ್ಕು ಬಾರಿ ಆಯ್ಕೆ ಆದವರು ಮತ್ತೆ ಸ್ಪರ್ಧೆ ಮಾಡುವಂತಿಲ್ಲ, ಆದರೂ ಪಕ್ಷ ಅವರಿಗೆ ಎರಡನೇ ಸ್ಥಾನಕ್ಕೆ ಸ್ಪರ್ಧೆ ಮಾಡಲು ಸೂಚಿಸಿತ್ತು. ಆದರೆ ಅವರೇ ಕಣಕ್ಕಿಳಿಯಲಿಲ್ಲ, ಎಸ್.ಆರ್. ಪಾಟೀಲ್‌ಗೆ ತಕ್ಕ ಗೌರವವನ್ನು ಕಾಂಗ್ರೆಸ್ ಕೊಡಲಿದೆ ಎಂದರು.

ಜೆಡಿಎಸ್ ಸದಸ್ಯ ಲಿಂಗಪ್ಪ ಮಾತನಾಡಿ, ಎಂಸಿ ನಾಣಯ್ಯ ಅವರನ್ನು ನೆನಪಿಸಿಕೊಳ್ಳುತ್ತೇನೆ, ಎಲ್ಲ ಇಲಾಖೆಗಳ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಅವರಿಗಿತ್ತು. ಅವರ ನಂತರ ಕೋಟ ಅವರನ್ನು ಆ ರೀತಿ ನೋಡುತ್ತಿದ್ದೇನೆ, ಒಳ್ಳೆ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಕೋಟ ಅವರ ಕೆಲಸ ನಾಣಯ್ಯ ಅವರನ್ನು ನೆನಪಿಸುತ್ತಿದೆ ಎಂದರು. ನಂತರ ಎಲ್ಲ ಸದಸ್ಯರ ಪರ ಕೋಟ ಶ್ರೀನಿವಾಸ ಪೂಜಾರಿಗೆ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ:ಕುಟುಂಬ ರಾಜಕಾರಣ : ಪರಿಷತ್ ಅಖಾಡದಲ್ಲಿ ಗೆದ್ದ 25 ಅಭ್ಯರ್ಥಿಗಳಲ್ಲಿ 10 ಮಂದಿಗೆ ಕುಟುಂಬ ರಾಜಕೀಯದ ಹಿನ್ನೆಲೆ..

Last Updated : Dec 15, 2021, 7:00 PM IST

ABOUT THE AUTHOR

...view details