ಬೆಳಗಾವಿ: ಜಿಲ್ಲೆಯಲ್ಲಿ ಇಂದು ಎರಡು ವರ್ಷದ ಹೆಣ್ಣು ಮಗು ಸೇರಿ ಒಟ್ಟು 36 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ.
ಬೆಳಗಾವಿಯಲ್ಲಿಂದು 2 ವರ್ಷದ ಹೆಣ್ಣು ಮಗು ಸೇರಿ 36 ಜನರಿಗೆ ಕೊರೊನಾ! - Belgaum corona pandemic
ಬೆಳಗಾವಿ ಜಿಲ್ಲೆಯಲ್ಲಿ ಇಂದು ಮಹಾರಾಷ್ಟ್ರದ ಸಂಪರ್ಕ ಹೊಂದಿದ್ದ 34 ಹಾಗೂ ಹರಿಯಾಣ ಟ್ರಾವೆಲ್ ಹಿಸ್ಟರಿ ಹೊಂದಿರುವ ಇಬ್ಬರಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿಂದು 2 ವರ್ಷದ ಹೆಣ್ಣುಮಗು ಸೇರಿ 36 ಜನರಿಗೆ ಕೊರೊನಾ ಪಾಸಿಟಿವ್
ಇಷ್ಟು ದಿನ ಸೇಫ್ ಆಗಿದ್ದ ಸವದತ್ತಿ ತಾಲೂಕಿಗೂ ಮಹಾಮಾರಿ ಕೊರೊನಾ ಎಂಟ್ರಿ ಕೊಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ 36 ಪ್ರಕರಣಗಳ ಪೈಕಿ 34 ಜನರಿಗೆ ಮಹಾರಾಷ್ಟ್ರದ ಸಂಪರ್ಕ ಇದ್ದು, ಹರಿಯಾಣ ಟ್ರಾವೆಲ್ ಹಿಸ್ಟರಿ ಹೊಂದಿರುವ ಇಬ್ಬರಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 39ಕ್ಕೆ ಏರಿಕೆಯಾಗಿವೆ.