ಬೆಳಗಾವಿ:ಜಿಲ್ಲೆಯಲ್ಲಿಂದು ಒಂದೇ ದಿನ 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 441ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿಂದು ಒಂದೇ ದಿನ 27 ಜನರಿಗೆ ಕೊರೊನಾ: 29 ಸೋಂಕಿತರು ಗುಣಮುಖ - Belgaum corona case
ಬೆಳಗಾವಿ ಜಿಲ್ಲೆಯಲ್ಲಿಂದು ಒಂದೇ ದಿನ 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 29 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಅಲ್ಲದೆ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 29 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಾಕತಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗೂ ಸೋಂಕು ದೃಢಪಟ್ಟಿದೆ. ಬೆಳಗಾವಿಯ ಹನುಮಾನ್ ನಗರದ ಮೂವರು, ಭಾರತ್ ನಗರದ ಇಬ್ಬರು, ಉಜ್ವಲ ನಗರ, ವಂಟಮೂರಿ ಕಾಲೋನಿ ಹಾಗೂ ಹಿಂಡಲಗಾದ ತಲಾ ಒಬ್ಬೊಬ್ಬರಿಗೆ ಸೋಂಕು ತಗುಲಿದೆ.
ಗೋಕಾಕ್ ತಾಲೂಕಿನ ಐವರು, ಅಥಣಿ ತಾಲೂಕಿನ ಹತ್ತು ಜನ, ರಾಮದುರ್ಗದ ಇಬ್ಬರು ಹಾಗೂ ಚಿಕ್ಕೋಡಿಯ ಓರ್ವನಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಸದ್ಯ 92 ಸಕ್ರಿಯ ಪ್ರಕರಣಗಳಿದ್ದು, ಕೊರೊನಾಗೆ ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ.