ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ನಾಗರಿಕ ಸೇವೆಗಳು ಸ್ತಬ್ಧ, ಪಾಲಿಕೆಗೆ 70 ಕೋಟಿ ರೂ. ನಷ್ಟ - belagavi leatest news

ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದ್ದು, ಉಪನೋಂದಣಿ ಕೇಂದ್ರಗಳು ಕೂಡ ಜನರಿಲ್ಲದೆ ಬಣಗುಡುತ್ತಿವೆ. ನಿವೇಶನ, ಜಮೀನು ಮಾರಾಟ ಹಾಗೂ ಖರೀದಿ ಆಗುತ್ತಿಲ್ಲ. ಕೊರೊನಾ ಎಫೆಕ್ಟ್​​ನಿಂದ ಉಪನೋಂದಣಿ ಕಚೇರಿಗಳಿಂದಲೂ ಸರ್ಕಾರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ..

Corona Effect Belagavi, civil services are quiet Crore Rs. Loss
ಕೊರೊನಾ ಎಫೆಕ್ಟ್: ಬೆಳಗಾವಿಯಲ್ಲಿ ನಾಗರಿಕ ಸೇವೆಗಳು ಸ್ತಬ್ಧ, ಪಾಲಿಕೆಗೆ 70 ಕೋಟಿ ರೂ. ನಷ್ಟ

By

Published : Sep 23, 2020, 5:55 PM IST

ಬೆಳಗಾವಿ :ಕೊರೊನಾ ನಿಯಂತ್ರಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಕಳೆದ ಆರು ತಿಂಗಳಿಂದ ನಾಗರಿಕ ಸೇವೆಗಳೆಲ್ಲವೂ ಬೆಳಗಾವಿಯಲ್ಲಿ ಸ್ತಬ್ಧವಾಗಿವೆ. ನಾಗರಿಕ ಸೇವೆಗಳನ್ನು ಒದಗಿಸಲು ಆಗದ ಕಾರಣ ಬೆಳಗಾವಿ ಮಹಾನಗರ ಪಾಲಿಕೆಗೆ ಅಂದಾಜು 70 ಕೋಟಿ ರೂ. ನಷ್ಟವಾಗಿದೆ.

ನಾಗರಿಕ ಸೇವೆಗಳು ಸ್ತಬ್ಧ, ಪಾಲಿಕೆಗೆ 70 ಕೋಟಿ ರೂ. ನಷ್ಟ

ಕೊರೊನಾದಿಂದ ರಿಯಲ್ ಎಸ್ಟೇಟ್ ಉದ್ಯಮ ನಿಂತ ನೀರಾಗಿದೆ. ನಿವೇಶನ ಖರೀದಿಸುವವರೂ ಇಲ್ಲ. ನಿವೇಶನ ಹೊಂದಿದವರು ಹೊಸ ಮನೆ ಕಟ್ಟಲು ಮುಂದೆ ಬರುತ್ತಿಲ್ಲ. ಕೊರೊನಾದಿಂದ ಅನೇಕರ ಉದ್ಯೋಗಗಳು ಕಡಿತವಾಗಿವೆ. ಉದ್ಯಮ ಕ್ಷೇತ್ರವೂ ಮಕಾಡೆ ಮಲಗಿದೆ. ಅನೇಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹೊಸ ಮನೆ ಕಟ್ಟಡಕ್ಕೆ ಯಾರೂ ಮುಂದಾಗುತ್ತಿಲ್ಲ.

ಮನೆ ಕಟ್ಟಡ ಅನುಮತಿ ಪಡೆಯಲು ಯಾರೂ ಪಾಲಿಕೆಗೆ ಬರುತ್ತಿಲ್ಲ. ಮಹಾನಗರದಲ್ಲಿ ಪ್ರತಿವರ್ಷ ಸಾವಿರಕ್ಕೂ ಅಧಿಕ ಹೊಸ ಕಟ್ಟಡಕ್ಕೆ ಅನುಮತಿಗಾಗಿ ಜನ ಅರ್ಜಿ ಸಲ್ಲಿಸುತ್ತಿದ್ದರು. ಮಾರ್ಚ್ ನಂತರ ಹೊಸ ಕಟ್ಟಡ ಅನುಮತಿಗೆ ಯಾರೂ ಅರ್ಜಿ ಸಲ್ಲಿಸಿಲ್ಲ. ಕಟ್ಟಡ ಪೂರ್ಣಗೊಂಡವರು ಕ್ಲಿಯರೆನ್ಸ್ ಸರ್ಟಿಫಿಕೇಟ್‍ಗಾಗಿ ಪಾಲಿಕೆಗೆ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ, ಕಟ್ಟಡ ಅನುಮತಿ ಹಾಗೂ ಸಿಸಿಗಾಗಿ ಅರ್ಜಿ ಸಲ್ಲಿಕೆಯಾಗದ ಕಾರಣ ಪಾಲಿಕೆಗೆ ಸಂಗ್ರಹವಾಗುತ್ತಿದ್ದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದ್ದು, ಉಪನೋಂದಣಿ ಕೇಂದ್ರಗಳು ಕೂಡ ಜನರಿಲ್ಲದೆ ಬಣಗುಡುತ್ತಿವೆ. ನಿವೇಶನ, ಜಮೀನು ಮಾರಾಟ ಹಾಗೂ ಖರೀದಿ ಆಗುತ್ತಿಲ್ಲ. ಕೊರೊನಾ ಎಫೆಕ್ಟ್​​ನಿಂದ ಉಪನೋಂದಣಿ ಕಚೇರಿಗಳಿಂದಲೂ ಸರ್ಕಾರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ.

ಜನನ-ಮರಣ ಪ್ರಮಾಣ ಪತ್ರ ವಿತರಣೆ ವಿಳಂಬ :ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರ ವಿತರಣೆಯೂ ವಿಳಂಬವಾಗುತ್ತಿದೆ. ಕೋವಿಡ್ ನಿಯಂತ್ರಣದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಈ ಕಾರಣಕ್ಕೆ ನಿಗದಿತ ಸಮಯದಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರ ಜನರಿಗೆ ಲಭ್ಯವಾಗುತ್ತಿಲ್ಲ. ಮೊದಲು ಎರಡ್ಮೂರು ದಿನಗಳಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತಿತ್ತು. ಹೀಗಾಗಿ, ಜನ ಜನನ ಹಾಗೂ ಮರಣ ಪ್ರಮಾಣ ಪತ್ರಕ್ಕೆ ಅಲೆದಾಡುವ ಸ್ಥಿತಿ ಇದೆ.

ಕೊರೊನಾ ಭಯ :ನಾಗರಿಕ ಸೇವೆ ಪಡೆಯುವುದು ಜನರ ಹಕ್ಕು. ಆದರೆ, ಅವುಗಳನ್ನು ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಪಾಲಿಕೆ ಅಧಿಕಾರಿಗಳು ಕೊರೊನಾ ನಿಯಂತ್ರಣದ ಕರ್ತವ್ಯದಲ್ಲಿರುವ ಕಾರಣ ಇವುಗಳನ್ನು ಜನರಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ಭಯದಿಂದ ಜನರೂ ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಕೊರೊನಾ ಭಯದಿಂದ ಕಚೇರಿಗೆ ಅಲೆದಾಡುವವರ ಸಂಖ್ಯೆಯೂ ಕ್ಷೀಣಿಸಿದೆ. ನಾಗರಿಕ ಸೇವೆಗಳು ಸ್ತಬ್ಧವಾಗಿದ್ದರೂ ಯಾವೊಬ್ಬ ನಾಗರಿಕನೂ ಮಹಾನಗರ ಪಾಲಿಕೆ ಕಚೇರಿಗೆ ದೂರು ದಾಖಲಿಸಿಲ್ಲ.

ABOUT THE AUTHOR

...view details