ಬೆಳಗಾವಿ:ಗಡಿ ಜಿಲ್ಲೆಯಲ್ಲಿ ನಾಡದ್ರೋಹಿ ಎಂಇಎಸ್ ಪುಂಡಾಟ ಮುದುವರೆಸಿದೆ. ದೇಶದ್ರೋಹ ಪ್ರಕರಣ ಕೈಬಿಟ್ಟ ಬೆನ್ನಲ್ಲೇ ಹಳೇಯ ಚಾಳಿ ಪುನರರಾಂಭಿಸಿದ್ದು ವಿವಾದಿತ ಪೋಸ್ಟ್ ಹಾಕಿ ಗಡಿ ಕ್ಯಾತೆ ತೆಗೆದಿದ್ದಾರೆ.
ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ ಗ್ರಾಫಿಕ್ ವಿಡಿಯೋ, ಫೋಟೋ ಪೋಸ್ಟ್ ಮಾಡಲಾಗಿದೆ. ಎಂಇಎಸ್ ಮುಖಂಡ ಶುಭಂ ಶೆಳಕೆ ಭಾಷಾ ಸಾಮರಸ್ಯ ಕದಡುವ ಯತ್ನ ಮಾಡಿದ್ದಾರೆ. ಇವರದ್ದೇ ಫೇಸ್‌ಬುಕ್ ಅಕೌಂಟ್‌ನಿಂದ ಪೋಸ್ಟ್ ಮಾಡಲಾಗಿದೆ.