ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಉಡುಪಿ ಪೊಲೀಸರು ಮತ್ತೆ ಬೆಳಗಾವಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನೇತೃತ್ವದ ತಂಡ ಮತ್ತೆ ತನಿಖೆ ಚುರುಕುಗೊಳಿಸಿದೆ. ಹಿಂಡಲಗಾ ಗ್ರಾ.ಪಂ.ಅಧ್ಯಕ್ಷ ನಾಗೇಶ್ ಮನ್ನೋಳಕರ್ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಂತೋಷ್ ಪಾಟೀಲ್ ಮನೆಯನ್ನು ನಾಗೇಶ್ ಮನ್ನೋಳಕರ್, ಗ್ರಾ.ಪಂ.ಸದಸ್ಯ ಎನ್.ಎಸ್.ಪಾಟೀಲ್ ಸೇರಿ ಜಿಪಿಎ ಮಾಡಿಸಿಕೊಂಡಿದ್ದರು.
ಜಿಪಿಎ ಮಾಡಿಸಿಕೊಂಡಿದ್ದೇಕೆ? ಜಿಪಿಎ ಮಾಡಿಸಿಕೊಂಡು ಎಷ್ಟು ಹಣ ಕೊಟ್ಟಿದ್ರಿ? 108 ಕಾಮಗಾರಿ ಆರಂಭಿಸಲು ಹೇಳಿದ್ದು ಯಾರು? ಎಂಬ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಉಡುಪಿ ಪೊಲೀಸರು ನಾಗೇಶ್ ಮನ್ನೋಳಕರ್ ಮೊಬೈಲ್‌ನ್ನು ಅನಾಲಿಸಿಸ್‌ಗೆ ಕಳಿಸಿದ್ದಾರೆ. ಹಿಂಡಲಗಾ ಗ್ರಾಪಂ 35 ಸದಸ್ಯರಿಗೂ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬ ಸದಸ್ಯರನ್ನು ಪ್ರತ್ಯೇಕವಾಗಿ ಒನ್ ಟು ಒನ್ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.