ಬೆಳಗಾವಿ :ಜಿಲ್ಲೆಯ ಶ್ರೀಕ್ಷೇತ್ರ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿನ ಅಕ್ರಮ ಅಂಗಡಿಗಳ ತೆರವಿಗೆ ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೋಟಿಸ್ ನೀಡದೇ ಏಕಾಏಕಿ ಅಂಗಡಿಗಳ ತೆರವು ಏಕೆ ಮಾಡುತ್ತಿದ್ದೀರಿ.. ಅಂಗಡಿಯಲ್ಲಿದ್ದ ಪೂಜಾ ಸಾಮಗ್ರಿ, ಕುಂಕುಮ, ಭಂಡಾರ ಮಣ್ಣು ಪಾಲಾಗಿವೆ. ಅಂಗಡಿಯಲ್ಲಿ ಸಾಮಗ್ರಿಗಳನ್ನು ತೆಗೆದುಕೊಳ್ಳತ್ತೇವೆ ಎಂದ್ರೂ ಕೇಳದೆ, ಏಕಾಏಕಿ ತೆರವು ಮಾಡಿದ್ದಾರೆ. ಕೊರೊನಾ ಕಾರಣದಿಂದ ಕಳೆದ 9 ತಿಂಗಳಿಂದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಬಂದ್ ಆಗಿದ್ದು, ವ್ಯಾಪಾರವೂ ಇರಲಿಲ್ಲ.