ಬೆಳಗಾವಿ: ಪ್ರವಾಹದ ಭೀತಿಯಲ್ಲಿದ್ದ ಘಟಪ್ರಭಾ ನದಿಪಾತ್ರದ ಜನರನ್ನು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಿದೆ. ಆದರೆ, ಕೇಂದ್ರದಲ್ಲಿ ಅನ್ಯೋನ್ಯತೆಯಿಂದ ಇರಬೇಕಿದ್ದ ಮಹಿಳೆಯರಿಬ್ಬರೂ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ.
ಗೋಕಾಕ್ ಕಾಳಜಿ ಕೇಂದ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಡೆ ಜಗಳ..! - ಕಾಳಜಿ ಕೇಂದ್ರದ ನೋಡಲ್ ಅಧಿಕಾರಿ
ಕಾಳಜಿ ಕೇಂದ್ರದಲ್ಲಿ ಅನ್ಯೋನ್ಯತೆಯಿಂದ ಇರಬೇಕಿದ್ದ ಮಹಿಳೆಯರು ಕಸ ಗುಡಿಸುವ ವಿಚಾರವಾಗಿ ಜಗಳವಾಡಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಕಾಳಜಿ ಕೇಂದ್ರದ ನೋಡಲ್ ಅಧಿಕಾರಿ ಇಬ್ಬರನ್ನು ಸಮಾಧಾನಪಡಿಸಲು ಹರಸಾಹಸಪಟ್ಟಿದ್ದಾರೆ.
ಗೋಕಾಕ ಕಾಳಜಿ ಕೇಂದ್ರದಲ್ಲಿ ಜಗಳ
ಇಬ್ಬರು ಮಹಿಳೆಯರ ಜಗಳ ಬಿಡಿಸಲು ಇತರ ಸಂತ್ರಸ್ತರು ಹೈರಾಣಾದ ಘಟನೆ ಗೋಕಾಕ್ನ ಕಾಳಜಿ ಕೇಂದ್ರದಲ್ಲಿ ನಡೆದಿದೆ. ಗೋಕಾಕ್ ನಗರದದ ಉಪ್ಪಾರಗಲ್ಲಿ - ಕುಂಬಾರಗಲ್ಲಿ ಮಹಿಳೆಯರ ಮಧ್ಯೆ ಗಲಾಟೆ ನಡೆದಿದೆ. ಕಾಳಜಿ ಕೇಂದ್ರದಲ್ಲಿ ಕಸ ಗುಡಿಸುವ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಬಳಿಕ ಇಬ್ಬರು ಕೈಕೈ ಮಿಲಾಯಿಸುವಷ್ಟರ ಮಟ್ಟಿಗೆ ಜಗಳಾಡಿದ್ದಾರೆ.
ಸ್ಥಳದಲ್ಲಿದ್ದ ಕಾಳಜಿ ಕೇಂದ್ರದ ನೋಡಲ್ ಅಧಿಕಾರಿ ಇಬ್ಬರನ್ನು ಸಮಾಧಾನಪಡಿಸಲು ಹರಸಾಹಸಪಟ್ಟಿದ್ದಾರೆ.