ಬೆಳಗಾವಿ: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರೊಂದು ಬ್ರೇಕ್ ವಿಫಲವಾಗಿ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿಯೇ ಕಾರು ಚಾಲಕ ಮೃತಪಟ್ಟಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ: ಬ್ರೇಕ್ ವಿಫಲವಾಗಿ ಕಾರು ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು - undefined
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಅಪಘಾತ. ಬ್ರೇಕ್ ಫೇಲ್ ಆಗಿ ಪಲ್ಟಿ ಹೊಡೆದ ಕಾರು. ಚಾಲಕ ಸ್ಥಳದಲ್ಲೇ ಸಾವು. ಅಪಘಾತದ ರಬಸಕ್ಕೆ ಕಾರ್ ನುಜ್ಜುಗುಜ್ಜು.
ರಸ್ತೆ ಅಪಘಾತ
ಹುಬ್ಬಳ್ಳಿ ನಿವಾಸಿ ಅಜಯ್ (40) ಮೃತ ಚಾಲಕ. ಸ್ವಿಫ್ಟ್ ವಿಡಿಐ ಕಾರಿನಲ್ಲಿ ಚಲಿಸುವ ಸಂದರ್ಭದಲ್ಲಿ ಬ್ರೇಕ್ ಫೇಲ್ ಆಗಿದ್ದರಿಂದ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಬಿಟ್ಟು ಹೊರವಲಯದಲ್ಲಿ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು ಅಜಯ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.