ಕರ್ನಾಟಕ

karnataka

ETV Bharat / city

ಸುದ್ದಿಯಲ್ಲಿರಲು ಕಾಂಗ್ರೆಸ್ ನಾಯಕರಿಂದ ಆರ್‌ಎಸ್ಎಸ್ ಟಾರ್ಗೆಟ್: ಸಚಿವ ಅಶ್ವತ್ಥನಾರಾಯಣ - ಆರ್‌ಎಸ್ಎಸ್

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಬರ್ಕಾಸ್ತ್ ಮಾಡಿಲ್ಲ ಅದರ ಅವಧಿ ಮುಗಿದಿದೆ. ಸಮಿತಿಯಲ್ಲಿ ರೋಹಿತ ಚಕ್ರತೀರ್ಥ ಮಾತ್ರ ಇರಲಿಲ್ಲ, ನಾಲ್ಕು ಜನ ಇದ್ದರು ಎಂದು ಸಚಿವರು ಸ್ಪಷ್ಟನೆ ನೀಡಿದರು.

C N Ashwath narayan reaction about text book Committee in Belagavi
ಡಾ. ಸಿ.ಎನ್​. ಅಶ್ವತ್ಥನಾರಾಯಣ

By

Published : Jun 4, 2022, 3:37 PM IST

ಬೆಳಗಾವಿ:ಸದಾ ಸುದ್ದಿಯಲ್ಲಿ ಇರಲೆಂದೇ ಕಾಂಗ್ರೆಸ್ ನಾಯಕರು ಆರ್‌ಎಸ್ಎಸ್ ಟಾರ್ಗೆಟ್ ಮಾಡುತ್ತಿದ್ದಾರೆ. ವೈಯಕ್ತಿಕ ಟೀಕೆ ಮಾಡುವುದಕ್ಕಿಂತ ತಪ್ಪು-ಒಪ್ಪುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಯಾವ ಕೆಲಸದಲ್ಲಿ ಏನು ದೋಷವಿದೆ, ಅದರ ಆಧಾರಿತವಾಗಿ ಮಾತನಾಡಬೇಕು. ತೆಜೋವಧೆ, ಅಪಮಾನ ಮಾಡುವಂತಹ, ಕೆಟ್ಟ ಹೇಳಿಕೆ ಕೊಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ ಹೇಳಿದರು.

ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ರೋಹಿತ ಚಕ್ರತೀರ್ಥ ಅವರನ್ನು ನೇಮಿಸಿದ್ದೇ ಗೊಂದಲಕ್ಕೆ ಕಾರಣವಾಯಿತಾ? ಎಂಬ ಪ್ರಶ್ನೆಗೆ, ಸಮಿತಿಯಲ್ಲಿ ಅವರು ಒಬ್ಬರೇ ಇರಲಿಲ್ಲ, ನಾಲ್ಕಾರು ಜನರಿದ್ದರು. ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಆ ಸಮಿತಿ ಮಾಡಿದೆ. ಪಠ್ಯಪುಸ್ತಕದಲ್ಲಿ ಏನೆಲ್ಲ ಅಳವಡಿಸಬೇಕೋ, ಅಳವಡಿಸುವಂತದ್ದು, ಜೋಡಿಸುವಂತದ್ದು ‌ಆಗಿದೆ. ಯಾವುದೇ ಅಭ್ಯಂತರಗಳಿದ್ದರೆ ಅದನ್ನು ಗಮನಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು.

ಸುದ್ದಿಯಲ್ಲಿರಲು ಕಾಂಗ್ರೆಸ್ ನಾಯಕರಿಂದ ಆರ್‌ಎಸ್ಎಸ್ ಟಾರ್ಗೆಟ್

ರೋಹಿತ್ ಚಕ್ರತೀರ್ಥ ಆರ್‌ಎಸ್ಎಸ್ ಮೂಲದವರು ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆಸಿದ ಅವರು, ನಾವೆಲ್ಲರೂ ಆರ್​ಎಸ್​ಎಸ್​ ಮೂಲದವರೇ. ನಮ್ಮ ಬೇರು ಇರುವುದೇ ಅಲ್ಲಿ. ಆದರೆ ನಾವು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಸಮಾಜಕ್ಕೆ ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಆರ್‌ಎಸ್ಎಸ್‌ನಲ್ಲಿ ಎಲ್ಲಾ ಧರ್ಮದವರು, ಎಲ್ಲ ಜಾತಿಯವರಿದ್ದಾರೆ ಎಂದು ತಿಳಿಸಿದರು.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ತನ್ನ ಕೆಲಸ ಪೂರ್ಣವಾಗಿ ನಿರ್ವಹಿಸಿದೆ. ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ, ಸಮಯ ಮುಗಿದ ಮೇಲೆ ಅದು ವಿಸರ್ಜನೆ ಆಗುತ್ತದೆ. ಸಮಿತಿಯನ್ನು ಬರ್ಕಾಸ್ತ್ ಮಾಡಿಲ್ಲ, ವಿಸರ್ಜನೆ ಆಗಿದೆ. ಸಲಹೆ ಸೂಚನೆಗಳಿದ್ದರೆ ಸೂಕ್ತ ಕ್ರಮ ಜರುಗಿಸುತ್ತೇವೆ. ಯಾವುದೇ ಕಾರಣಕ್ಕೂ ಸಮಾಜದಲ್ಲಿ ಒಡಕುಂಟು ಮಾಡಲು ನಮ್ಮ ಸರ್ಕಾರದಲ್ಲಿ ಅವಕಾಶ ಇಲ್ಲ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ಹಿಜಾಬ್ ವಿವಾದ ಮತ್ತೋರ್ವ ವಿದ್ಯಾರ್ಥಿನಿ ಕಾಲೇಜಿನಿಂದ ಅಮಾನತು: ಒಟ್ಟು ಏಳು ವಿದ್ಯಾರ್ಥಿನಿಯರು ಅಮಾನತು..!

ABOUT THE AUTHOR

...view details