ಕರ್ನಾಟಕ

karnataka

ETV Bharat / city

ಕಾಗವಾಡ ಉಪಚುನಾವಣೆ: ಬೆಂಗಳೂರಿಗೆ ದೌಡಾಯಿಸಿದ ಶ್ರೀಮಂತ್​ ಪಾಟೀಲ್​ - Srimant Patil

ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ್​ ‌ಪಾಟೀಲ್​ ಬೆಂಗಳೂರಿಗೆ ‌ದೌಡಾಯಿಸಿದ್ದು, ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬೆಂಗಳೂರಿಗೆ ತೆರಳಿದ ಶ್ರೀಮಂತ್​ ಪಾಟೀಲ್​

By

Published : Sep 21, 2019, 7:14 PM IST

ಬೆಳಗಾವಿ: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ್​ ‌ಪಾಟೀಲ್​ ಬೆಂಗಳೂರಿಗೆ ‌ದೌಡಾಯಿಸಿದ್ದಾರೆ.

ಬೆಂಗಳೂರಿಗೆ ತೆರಳಿದ ಶ್ರೀಮಂತ್​ ಪಾಟೀಲ್​

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಇಂಡಿಗೋ ಏರ್​ಲೈನ್ಸ್ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಪಾಟೀಲ್​ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಗವಾಡ ಕ್ಷೇತ್ರದಲ್ಲಿಯೇ ಇದ್ದರು. ಉಪಚುನಾವಣೆ ‌ದಿನಾಂಕ ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿಗೆ ‌ಪ್ರಯಾಣ ಬೆಳೆಸಿದರು.

ಶ್ರೀಮಂತ್​ ‌ಪಾಟೀಲ್​ ದಿಢೀರ್​ ಬೆಂಗಳೂರಿಗೆ ಪ್ರಯಾಣ ಬೆಳಸಿರುವುದುನ್ನು ಗಮನಿಸಿದರೆ ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.

ABOUT THE AUTHOR

...view details