ಕರ್ನಾಟಕ

karnataka

ETV Bharat / city

ಬಸ್​ ಓವರ್‌ಟೇಕ್ ಮಾಡಲು ಹೋಗಿ ಅಪಘಾತ: ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವು - chikkodi bus bike accident news

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಓವರ್‌ಟೇಕ್ ಮಾಡಲು ಹೋಗಿ ಬಸ್‌ಗೆ ಬೈಕ್ ಡಿಕ್ಕಿಯಾಗಿ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.

chikkodi-bus-bike-accident
ಚಿಕ್ಕೋಟಿ ಬಸ್ ಬೈಕ್ ಅಪಘಾತ

By

Published : Dec 19, 2019, 5:14 PM IST

ಚಿಕ್ಕೋಡಿ :ಓವರ್‌ಟೇಕ್ ಮಾಡಲು ಹೋಗಿ ಬಸ್‌ಗೆ ಬೈಕ್ ಡಿಕ್ಕಿಯಾಗಿ ಹಿಂಬದಿ ಕುಳಿತಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ‌.

ತಾಲೂಕಿನ ಹಳ್ಳೂರು ಗ್ರಾಮದ ಶಾಂತವ್ವ ಬಸಪ್ಪ ಗೋಸಬಾಳ (50) ಮೃತ ಮಹಿಳೆ.

ಮೂಡಲಗಿ ಪಟ್ಟಣದ ಪುರಸಭೆಯ ಎದುರಿಗೆ ಬಸ್ ಹಿಂದಿಕ್ಕಲು ಪ್ರಯತ್ನಿಸಿದಾಗ ಸಮತೋಲನ ತಪ್ಪಿ ಬೈಕ್ ಮೇಲಿದ್ದ ಮಹಿಳೆ ಜಾರಿ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಚಿಕ್ಕೋಡಿ ಬಸ್ ಬೈಕ್ ಅಪಘಾತ

ಹಳ್ಳೂರ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿ ಶಾಂತವ್ವ, ಮೂಡಲಗಿಯಲ್ಲಿ ಆಸ್ಪತ್ರೆಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details