ಬೆಳಗಾವಿ: ಪಿಪಿಇ ಕಿಟ್ ಧರಿಸದೇ ಕೆಲ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ನಡೆದಿದೆ.
8ಕ್ಕೂ ಅಧಿಕ ಮೃತ ಸೋಂಕಿತರ ಶವಗಳನ್ನು ಇಂದು ಸ್ಮಶಾನಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸಿದ್ದ ನಾಲ್ವರು ಸಿಬ್ಬಂದಿ ಮೃತ ದೇಹವನ್ನು ಚಿತೆ ಮೇಲೆ ಹಾಕಿದರು. ಈ ವೇಳೆ ಉಳಿದ ಇಬ್ಬರು ಪಾಲಿಕೆಯ ಆರೋಗ್ಯ ಇಲಾಖೆ ಸಿಬ್ಬಂದಿ ದೈನಂದಿನ ಬಟ್ಟೆಯಲ್ಲಿದ್ದದ್ದು ಕಂಡು ಬಂತು.
ಪಿಪಿಇ ಕಿಟ್ ಧರಿಸದೇ ಸೋಂಕಿತರ ಅಂತ್ಯ ಸಂಸ್ಕಾರ ಇನ್ನು ಸದಾಶಿವನಗರದ ಸ್ಮಶಾನದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ನಂತರದಲ್ಲಿ ಸಾಮಾನ್ಯ ರೋಗಕ್ಕೆ ಸಾವನ್ನಪ್ಪಿದವರಿಗೆ ಅವಕಾಶ ನೀಡಲಾಗಿದೆ.
ಶವ ಸಂಸ್ಕಾರ ಮಾಡುವ ಸಿಬ್ಬಂದಿಗೆ ಮಾಸ್ಕ್, ಪಿಪಿಇ ಕಿಟ್ ನೀಡದ ಜಿಲ್ಲಾಡಳಿತ
ಕೊರೊನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ಸ್ಮಶಾನ ಸಿಬ್ಬಂದಿಗೆ ಅಧಿಕಾರಿಗಳು ಪಿಪಿಇ ಕಿಟ್ ನೀಡಿಲ್ಲ. ಸ್ಮಶಾನ ಸಿಬ್ಬಂದಿಗೆ ಪಿಪಿಇ ಕಿಟ್ ನೀಡುವಂತೆ ಸರ್ಕಾರ ಆದೇಶ ಮಾಡಿದ್ರೂ ಅಧಿಕಾರಿಗಳು ಮಾತ್ರ ಆದೇಶ ಪಾಲಿಸುತ್ತಿಲ್ಲ. ಸೋಂಕಿತರ ಅಂತ್ಯಕ್ರಿಯೆ ವೇಳೆ ಪಿಪಿಇ ಕಿಟ್ ಧರಿಸದ ಸ್ಮಶಾನ ಸಿಬ್ಬಂದಿಯ ಫೋಟೊ ಲಭ್ಯವಾಗಿದೆ.