ಕರ್ನಾಟಕ

karnataka

ETV Bharat / city

ಸೌಂಡ್ ಮಾಡ್ತಾ ಓಡಾಡ್ತೀರಾ.. ಬುಲೆಟ್ ಸವಾರರಿಗೆ ಬೆಳಗಾವಿ ಪೊಲೀಸರಿಂದ ಶಾಕ್! - ಬೆಳಗಾವಿ ಕ್ರೈಂ ನ್ಯೂಸ್

ಬುಲೆಟ್​​ನ ಕರ್ಕಶ ಶಬ್ದದ ಕಿರಿಕಿರಿ ತಪ್ಪಿಸಲು ಪೊಲೀಸರು ಮುಂದಾಗಿದ್ದಾರೆ. ಸವಾರರಿಗೆ ಬಿಸಿ ಮುಟ್ಟಿಸಿ, 13 ಬುಲೆಟ್​ಗಳನ್ನು ವಶಕ್ಕೆ ಪಡೆದಿದ್ದಾರೆ.

bullet
bullet

By

Published : Oct 19, 2021, 4:00 PM IST

ಬೆಳಗಾವಿ:ದೋಷಪೂರಿತ ಸೈಲೆನ್ಸ್ ಅಳವಡಿಸಿ ಓಡಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನಗರದ ಬುಲೆಟ್ ಸವಾರರಿಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ನಗರದಲ್ಲಿ ಬುಲೆಟ್​​ಗಳಿಂದ ಹೊರಬರುವ ಕರ್ಕಶ ಶಬ್ದದಿಂದ ಮಕ್ಕಳು ಹಾಗೂ ನಾಗರಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ 13 ಸವಾರರ ಮೇಲೆ ಪ್ರಕರಣ ದಾಖಲಿಸಿ ಬುಲೆಟ್​​ಗಳನ್ನು ವಶಕ್ಕೆ ಪಡೆದು ಆರ್​ಟಿಒಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಕಾರ್ಯಾಚರಣೆ ಮುಂದುವರೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಬುಲೆಟ್ ವಶ

ನಗರದಲ್ಲಿ 10 ಸಾವಿರಕ್ಕೂ ಅಧಿಕ ಜನರು ಬುಲೆಟ್ ಹೊಂದಿದ್ದಾರೆ. ಬಹುತೇಕರು ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡಿದ್ದಾರೆ. ಈ ಎಲ್ಲರ ಬಗ್ಗೆಯೂ ಪೊಲೀಸರು ನಿಗಾ ಇಟ್ಟಿದ್ದಾರೆ.
(ಬುಲೆಟ್​​​ ರೈಡ್​​, ಕುದುರೆ ಸವಾರಿಗೆ ಸೈ ಎಂದ ಮಹಿಳೆ...ಪುಟ್ಟ ಹಳ್ಳಿಯ ಸೀರೆಯುಟ್ಟ ನಾರಿಯ ಸಾಹಸ)

ABOUT THE AUTHOR

...view details