ಬೆಳಗಾವಿ: ಡೈರಿ ವಿಚಾರ ಮುಚ್ಚಿ ಹಾಕಲೆಂದೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಚಿವ ಡಿಕೆಶಿ ಮನೆಗೆ ಹೋಗಿದ್ದರು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಡೈರಿ ಮುಚ್ಚಿ ಹಾಕಲೆಂದೇ ಡಿಕೆಶಿ ಮನೆಗೆ ಬಿಎಸ್ವೈ ಹೋಗಿದ್ದು: ಸಿಎಂ ಹೆಚ್ಡಿಕೆ - undefined
ಯಡಿಯೂರಪ್ಪ ಅವರು ಡೈರಿ ವಿಚಾರ ಹೊಂದಾಣಿಕೆ ಮಾಡಲೆಂದೇ ಡಿಕೆಶಿ ಮನೆಗೆ ಹೋಗಿದ್ದರು ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸಿಎಂ ಎಚ್.ಡಿ ಕುಮಾರಸ್ವಾಮಿ
ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಡೈರಿ ವಿಚಾರ ಹೊಂದಾಣಿಕೆ ಮಾಡಲೆಂದೇ ಡಿಕೆಶಿ ಮನೆಗೆ ಹೋಗಿದ್ದರು. ಡಿಕೆಶಿ ಮನೆಯಲ್ಲಿ ಯಡಿಯೂರಪ್ಪ ಅವರಿಗೆ ಸೇರಿದ ಡೈರಿ ಇರುವುದು ನನಗೆ ಗೊತ್ತಿದೆ. ಇದನ್ನು ಸಂಬಂಧಪಟ್ಟವರೇ ತನಿಖೆ ಮಾಡಬೇಕು ಎಂದು ಬಿಎಸ್ವೈಗೆ ತಿರುಗೇಟು ನೀಡಿದರು.
ಬಿಎಸ್ವೈಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು
ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಹಲವು ಸಲ ಯತ್ನಿಸಿದೆ. ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂದು ಮೋದಿ ಕಡೆಯಿಂದ ಹೇಳಿಸಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ನನ್ನ ಆತ್ಮೀಯ ಸ್ನೇಹಿತ. ಯಾರ ಬಲ ಏನೆಂಬುವುದು ಗೊತ್ತಿದೆ. ಸಮಯ ಬಂದಾಗ ಬಳಸಿಕೊಳ್ಳುತ್ತೇನೆ ಎಂದರು.