ಬೆಳಗಾವಿ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಹಿಡಕಲ್ ಜಲಾಶಯ ತುಂಬುವ ಹಂತಕ್ಕೆ ತಲುಪಿದೆ.
ಗೋಕಾಕ್ ಹೊರವಲಯದ ಲೋಳಸೂರ ಸೇತುವೆ ಮುಳುಗಡೆ: ವಾಹನ ಸವಾರರ ಪರದಾಟ - ಘಟಪ್ರಭಾ ನದಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಹಿಡಕಲ್ ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು, ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆಯಾಗಿದೆ.

ಲೋಳಸೂರ ಸೇತುವೆ ಮುಳುಗಡೆ
ಜಲಾಶಯದಿಂದ ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಗೋಕಾಕ್-ಘಟಪ್ರಭಾ ಸಂಪರ್ಕಿಸುವ ಲೋಳಸುರ ಜಲಾಶಯ ಮುಳುಗಡೆಯಾಗಿದೆ. ಅಪಾಯದಲ್ಲೇ ಸೇತುವೆ ಮೇಲೆ ವಾಹನ ಸವಾರರು ದಾಟುತ್ತಿದ್ದಾರೆ.
ಲೋಳಸೂರ ಸೇತುವೆ ಮುಳುಗಡೆ
ಜಲಾಶಯದಿಂದ ನೀರು ಹರಿಸಿದರೆ ಸೇತುವೆ ಸಂಪೂರ್ಣ ಮುಳುಗಡೆ ಆಗಲಿದೆ. ಅಲ್ಲದೆ ಗೋಕಾಕ್-ಘಟಪ್ರಭಾ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕಳೆದ ವರ್ಷ ಪ್ರವಾಹದ ವೇಳೆಯೂ ಈ ಸೇತುವೆ ಒಂದು ತಿಂಗಳ ಕಾಲ ಮಳುಗಡೆಯಾಗಿತ್ತು.