ಚಿಕ್ಕೋಡಿ :ರಾಜ್ಯದಲ್ಲಿ ಇಂದು 58 ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಆಯ್ಕೆಗೆ ಮತದಾನ ನಡೆಯುತ್ತಿದೆ. ಎದುರಾಳಿ ಅಭ್ಯರ್ಥಿಯನ್ನು ಸೋಲಿಸಲು ಕಿಡಿಗೇಡಿಗಳು ಮಾಟಮಂತ್ರದ ಮೊರೆ ಹೋಗುತ್ತಿದ್ದಾರೆ.
ಎದುರಾಳಿ ಅಭ್ಯರ್ಥಿಯನ್ನು ಸೋಲಿಸಲು ಮಾಟಮಂತ್ರದ ಮೊರೆ : ಸಿಸಿಟಿವಿ ದೃಶ್ಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಕುಲಗೋಡ ಎಂಬುವರ ಮನೆ ಮುಂದೆ ಬೈಕ್ನಲ್ಲಿ ಬಂದ ಕಿಡಿಗೇಡಿಗಳು ಮಂತ್ರಿಸಿದ ಲಿಂಬೆ ಹಣ್ಣನ್ನು ಬಿಸಾಕಿ ಹೋಗಿದ್ದಾರೆ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದಲ್ಲದೇ ಅವರ ಮನೆಯ ಪಕ್ಕದ ರಸ್ತೆ ಬದಿಯಲ್ಲಿ ಹಾಗೂ ಮತಗಟ್ಟೆ ಕೇಂದ್ರದ ಬಳಿ ಯಾರೋ ಕಿಡಿಗೇಡಿಗಳು ಲಿಂಬೆ ಹಣ್ಣು, ತೆಂಗಿನಕಾಯಿ, ಕುಂಕುಮ-ಅರಿಶಿಣ ಹಾಕಿ ಹೋಗಿದ್ದಾರೆ. ಬಳಿಕ ಮತಗಟ್ಟೆ ಕೇಂದ್ರದ ಏಜೆಂಟ್ ನೀರಿನ ಟ್ಯಾಂಕ್ ಮೂಲಕ ನೀರು ಸುರಿದು ಶುದ್ಧೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ
ಇದನ್ನೂ ಓದಿ:ಅಥಣಿ ಪುರಸಭೆ ಚುನಾವಣೆ: ಶಾಸಕ ಮಹೇಶ್ ಕುಮಟಳ್ಳಿ ಮತದಾನ