ಚಿಕ್ಕೋಡಿ (ಬೆಳಗಾವಿ):ಹುಕ್ಕೇರಿ ತಾಲೂಕಿನ ಸಂಕೇಶ್ವರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರ ಬೆಂಬಲದಿಂದ ಬಿಜೆಪಿ ಜಯಭೇರಿ ಸಾಧಿಸಿದೆ.
ಸಂಕೇಶ್ವರ ಪುರಸಭೆ ಚುನಾವಣೆ: ಮೇಲುಗೈ ಸಾಧಿಸಿದ ಬಿಜೆಪಿ
ಸಂಕೇಶ್ವರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರ ಬೆಂಬಲದಿಂದ ಬಿಜೆಪಿ ಜಯಭೇರಿ ಸಾಧಿಸಿದೆ.
ಸಂಕೇಶ್ವರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದವು. ಇಂದು ನಡೆದ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರನ್ನ ಆಯ್ಕೆ ಮಾಡಿದರು. ಕಾಂಗ್ರೆಸ್ ಪರ 11, ಬಿಜೆಪಿ ಪರ 14 ಸದಸ್ಯರ ಬೆಂಬಲ ದೊರೆಯಿತು. ಬಿಜೆಪಿಯ 11 ಸದಸ್ಯರು, ಹುಕ್ಕೇರಿ ಶಾಸಕ ಉಮೇಶ ಕತ್ತಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಪಕ್ಷೇತರ ಸದಸ್ಯ ಅಜೀತ ಕರಜಗಿ ಬೆಂಬಲದಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾದವು.
ಕಾಂಗ್ರೆಸ್ನಿಂದ ಶೆವಂತ ಕಬ್ಬೂರಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಡಾ.ಜಯಪ್ರಕಾಶ ಕರಜಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿಗೆ ಶಾಸಕ ಸಂಸದರ ಮತ ಚಲಾವಣೆಯಾದ್ದರಿಂದ ಬಿಜೆಪಿ ಬಲ 14ಕ್ಕೆ ಏರುವ ಮೂಲಕ ಪುರಸಭೆಯಲ್ಲಿ ಕಮಲ ಅರಳಿತು.