ಕರ್ನಾಟಕ

karnataka

ETV Bharat / city

ಅಥಣಿ,ಕಾಗವಾಡ ಕ್ಷೇತ್ರಗಳ ಉಪಸಮರದಲ್ಲಿ ಬಿಜೆಪಿಗೆ ಜಯ.. ಸಚಿವ ಶೆಟ್ಟರ್​ ವಿಶ್ವಾಸ - By-election in Athani and Kagawada constituencies

ಅಥಣಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲವಿದೆ. ಈ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್​

By

Published : Nov 18, 2019, 4:27 PM IST

ಬೆಳಗಾವಿ:ಅಥಣಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲವಿದೆ. ಈ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಥಣಿ,ಕಾಗವಾಡ ಕ್ಷೇತ್ರಗಳ ಉಪಸಮರದಲ್ಲಿ ಬಿಜೆಪಿಗೆ ಜಯ.. ಸಚಿವ ಶೆಟ್ಟರ್​ ವಿಶ್ವಾಸ

ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಬಳಿಕ ಅಥಣಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಯಡಿಯೂರಪ್ಪನವರ ಸರ್ಕಾರ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಎನ್‌ಡಿಎ ಸರ್ಕಾರವಿದೆ. ಕರ್ನಾಟಕದ ಅಭಿವೃದ್ಧಿಗೆ ಮತ್ತು ಅಭಿವೃದ್ಧಿ ದಿಕ್ಕಿಗೆ ಬದಲಾವಣೆ ತರುವಂತಹ ಚುನಾವಣೆಗಳಿವು. ಸರ್ಕಾರದ ಸ್ಟೆಬಿಲಿಟಿ ನಿಟ್ಟಿನಲ್ಲಿ ರಾಜ್ಯದ 15 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಉಪಚುನಾವಣೆಗೆ ನಿಂತಿದ್ದು. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಶಾಲಿಯಾಗ್ತಾರೆ.

ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳು ಬಿಜೆಪಿಯ ಬಲಾಢ್ಯ ಹಾಗೂ ಗಂಡು ಮೆಟ್ಟಿದ ಕ್ಷೇತ್ರಗಳು. ಎರಡು ಕ್ಷೇತ್ರದಲ್ಲಿ ಯುವಕರ, ಬೆಂಬಲಿಗರ,ಕಾರ್ಯಕರ್ತರ ಸಭೆ ಮಾಡಿ ಅವರ ದುಗುಡವನ್ನ ದೂರ ಮಾಡಿ ಸಮಾಧಾನ ಮಾಡಿದ್ದೇವೆ. ಲಕ್ಷ್ಮಣ ಸವದಿಯವರ ನಾಯಕತ್ವಕ್ಕೆ ಯಾವುದೇ ತೊಂದರೆಯಾಗದಂತೆ ಬಿಜೆಪಿ ಕ್ರಮಕೈಗೊಳ್ಳುತ್ತೆ ಎಂದರು.

ABOUT THE AUTHOR

...view details