ಚಿಕ್ಕೋಡಿ :ಬಿಜೆಪಿಯವರಿಗೆ ಜನರ ಹಿತ ಹಾಗೂ ಅಭಿವೃದ್ದಿ ದೃಷ್ಟಿಕೋನ ಇಲ್ಲವೇ ಇಲ್ಲ. ಬಿಜೆಪಿಯವರು ಸುಳ್ಳು ಹೇಳೋದ್ರಲ್ಲಿ ಬಹಳ ನಿಸ್ಸೀಮರು. ಅವರಿಗೆ ರಾಜಕೀಯ ಅಂದ್ರೇ ಕೇವಲ ಕೋಮುವಾದ ಮಾಡೋದು, ಹೇಗಾದ್ರೂ ಮಾಡಿ ಅಧಿಕಾರಕ್ಕೆ ಬರೋದೇ ಅವರ ಗುರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಸಿಎಂ ಸ್ಥಾನ ಹೋಗುತ್ತೆ ಅಂತಾ ಗೊತ್ತಿತ್ತು. ಆದರೂ ಸಹ ಇಲ್ಲಿಗೆ ಬಂದು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸುಳ್ಳು ಭರವಸೆ ನೀಡಿ ಹೋಗಿದ್ದಾರೆ. ಜುಲೈ 25ರ ನಂತರ ಒಂದು ಗಂಟೆಯೂ ಸಹ ಮುಂದುವರೆಯಬಾರದು ಅಂತಾ ಯಡಿಯೂರಪ್ಪಗೆ ಹೇಳಿದ್ದರು ಎಂದು ತಿಳಿಸಿದರು.