ಬೆಳಗಾವಿ:ಹಲವು ವರ್ಷಗಳಿಂದ ಗೋಕಾಕ್ನಲ್ಲಿರುವ ಸರ್ವಾಧಿಕಾರಿ ಮನೋಭಾವನೆ ಹೋಗಲಾಡಿಸಲು ಹೋರಾಟ ಮಾಡುತ್ತಾ ಬಂದಿದ್ದೇನೆ. ಅದಕ್ಕಾಗಿ ಮುಂದೆಯೂ ಹೋರಾಡುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ.. ಗೋಕಾಕ್‌ನ ಬಿಜೆಪಿ ನಾಯಕ ಅಶೋಕ್ ಪೂಜಾರಿ ನಡೆ ಏನು? - Karnataka political development
ಗೋಕಾಕ್ನಲ್ಲಿ ಸರ್ವಾಧಿಕಾರಿ ಮನೋಭಾವನೆ ಹೋಗಲಾಡಿಸಲು ಹೋರಾಟ ಮಾಡುತ್ತಿದ್ದೇನೆ. ಮುಂದೆಯೂ ಹೋರಾಡುತ್ತೇನೆ. ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಇಚ್ಛೆಯಂತೆ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ. ಪ್ರಸ್ತುತ ನನ್ನ ಹಿಂಬಾಲಕರು, ಅಭಿಮಾನಿಗಳಿಗೆ ಗೊಂದಲ ಬೇಡ. ಅ.16 ರಿಂದ 30ರವರೆಗೆ ಗೋಕಾಕ್‌ನ ಪ್ರತಿಯೊಂದು ಭಾಗಕ್ಕೂ ಭೇಟಿ ನೀಡುತ್ತೇನೆ. ಮತದಾರರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ನವೆಂಬರ್ ಮೊದಲ ವಾರದಲ್ಲಿ ಸಭೆ ಹಮ್ಮಿಕೊಳ್ಳಲಿದ್ದು, ಅಂದು ತೆಗೆದುಕೊಳ್ಳುವ ನಿರ್ಣಯದ ಮೇಲೆ ನನ್ನ ರಾಜಕೀಯ ನಡೆ ಇರುತ್ತದೆ ಎಂದರು.
ಇತ್ತ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಲಕ್ಷಣ ದಟ್ಟವಾದ ಹಿನ್ನೆಲೆ ಇಲ್ಲಿನ ಬಿಜೆಪಿ ನಾಯಕರಿಗೆ ತಳಮಳ ಪ್ರಾರಂಭವಾಗಿತ್ತು. ಗೋಕಾಕ್ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಪಕ್ಷ ಸಂಘಟಿಸಿಕೊಂಡು ಬಂದಿರುವ ಅಶೋಕ್ ಪೂಜಾರಿ ಪಕ್ಷ ತೊರೆಯುವ ಚಿಂತನೆ ನಡೆಸಿದ್ದು, ನಿಗಮ ಮಂಡಳಿ ಸ್ಥಾನ ನೀಡಿದ್ದರೂ ಸ್ವೀಕರಿಸದೆ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.