ಕರ್ನಾಟಕ

karnataka

ETV Bharat / city

ಬೆಳಗಾವಿ: ರಸ್ತೆ‌ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ, ಕೃತ್ಯ ಸಿಸಿಟಿವಿಯಲ್ಲಿ ಸೆರೆ - ರಸ್ತೆ‌ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ

ವ್ಯಕ್ತಿಯೊಬ್ಬ ರಸ್ತೆ‌ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Bike theft
ರಸ್ತೆ‌ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ

By

Published : Sep 23, 2022, 2:18 PM IST

ಬೆಳಗಾವಿ:ರಸ್ತೆ‌ ಪಕ್ಕ ನಿಲ್ಲಿಸಲಾಗಿದ್ದ ಬೈಕ್ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ‌ಜಿಲ್ಲೆಯ ಬೈಲಹೊಂಗಲ ‌ಪಟ್ಟಣದಲ್ಲಿ ನಡೆದಿದೆ. ಬೈಲಹೊಂಗಲ ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಸಮೀಪದ ಕೆನರಾ ಬ್ಯಾಂಕ್ ಎದುರು ಬೈಕ್ ನಿಲ್ಲಿಸಲಾಗಿತ್ತು. ನಿಲ್ಲಿಸಿದ್ದ ದ್ವಿ-ಚಕ್ರ ವಾಹನವನ್ನು ವ್ಯಕ್ತಿಯೊಬ್ಬ ಕದ್ದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಸ್ತೆ‌ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ: ಸಿಸಿಟಿವಿ ದೃಶ್ಯ

ಈ ಬೈಕ್​ ಪಟ್ಟಣದ ಅನ್ನಪೂರ್ಣೇಶ್ವರಿ ಖಾನಾವಳಿ ಮಾಲೀಕ ವಿಜಯಕುಮಾರ ರಾಜಗೋಳಿ ಎಂಬುವರಿಗೆ ಸೇರಿದ್ದಾಗಿದೆ. ಬಜಾಜ್ ಕಂಪನಿಯ ಪ್ಲಾಟಿನಾ ಬೈಕ್ ಸೆ.17 ರಂದು ಸಂಜೆ ಕಳ್ಳ ಎಗರಿಸಿದ್ದ. ಬೈಕ್ ಮಾಲೀಕ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಬಳಿಕ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬೈಕ್ ಕಳುವಾದ ಬಗ್ಗೆ ಗೊತ್ತಾಗಿದೆ. ಈ ಕುರಿತು ವಿಜಯಕುಮಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಲಹೊಂಗಲ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಥಣಿ: ನರ್ಸ್​ ವೇಷದಲ್ಲಿ ಬಂದು ನವಜಾತ ಶಿಶು ಕದ್ದೊಯ್ದ ಚಾಲಾಕಿ

ABOUT THE AUTHOR

...view details