ಬೆಳಗಾವಿ :ರಾಜ್ಯದಲ್ಲಿ ಕೊರೊನಾ ಭೀತಿಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ. ರಸ್ತೆಗಿಳಿದ ಪುಂಡರಿಗೆ ಪೊಲೀಸರು ಲಾಠಿ ಬಿಸಿ ಮುಟ್ಟಿಸುತ್ತಿದ್ದಾರೆ. ಸದ್ಯ ನಗರದಲ್ಲೊಬ್ಬ ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು 'ನಾಯಿ ಕಡಿದಿದೆ ಬಿಟ್ಟು ಬಿಡಿ' ಎಂಬ ಫಲಕ ಹಿಡಿದು ಸಂಚಾರ ಮಾಡಿದ ಘಟನೆ ನಡೆದಿದೆ.
ಕೊರೊನಾ ನಿರ್ಬಂಧ : ನನಗೆ 'ನಾಯಿ ಕಚ್ಚಿದೆ ಬಿಟ್ಟು ಬಿಡಿ..' - ನಾಯಿ ಕಚ್ಚಿದೆ ಬಿಟ್ಟು ಬಿಡಿ ಫಲಕ
ಕೊರೊನಾ ಲಾಕ್ಡೌನ್ ಹಿನ್ನೆಲೆ ಬೀದಿಗಿಳಿದ ಜನರಿಗೆ ಲಾಠಿ ಬಿಸಿ ಮುಟ್ಟಿಸುತ್ತಿರುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಳಗಾವಿ ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ವಿಭಿನ್ನ ನಡೆ ಅನುಸರಿಸಿ ಗಮನ ಸೆಳೆದಿದ್ದಾನೆ..
ಬೆಳಗಾವಿ ಲಾಕ್ಡೌನ್
ನಾಯಿ ಕಡೆತಕ್ಕೊಳಗಾದ ಖಾನಾಪುರ ಪಟ್ಟಣದ ವ್ಯಕ್ತಿಯೊಬ್ಬ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಆಗಮಿಸುವ ಮಾರ್ಗ ಮಧ್ಯದಲ್ಲಿ ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು 'ನಾಯಿ ಕಡಿದಿದೆ ನಾವು ಆಸ್ಪತ್ರೆಗೆ ಹೋಗಬೇಕು ದಯವಿಟ್ಟು ಬಿಡಿ' ಎಂಬ ಬರಹವುಳ್ಳ ಫಲಕ ಹಿಡಿದು ಸಂಚಾರ ಮಾಡಿದ್ದಾನೆ.