ಕರ್ನಾಟಕ

karnataka

ETV Bharat / city

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರ ಮೂಲದ 6 ಮಂದಿ ಬೆಳಗಾವಿ ಪೊಲೀಸ್ ವಶ - belagavi beggars dressed as Muslim

ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಆಂಧ್ರ ಪ್ರದೇಶ ಮೂಲದ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Belgaum police detained six people who behave suspiciously
ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಆಂಧ್ರ ಮೂಲದ ಆರು ಮಂದಿಯನ್ನು ವಶಕ್ಕೆ ಪಡೆದ ಬೆಳಗಾವಿ ಪೊಲೀಸರು

By

Published : Feb 17, 2022, 10:02 AM IST

ಬೆಳಗಾವಿ: ಸಂದೇಹಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಆರು ಮಂದಿಯನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಇಲ್ಲಿನ ವೀರಭದ್ರ ನಗರದಲ್ಲಿ ಈ ಆರು ಮಂದಿ ಪ್ರತಿ ಮನೆಗಳನ್ನು ನೋಡುತ್ತಾ ಶಂಕಾಸ್ಪದವಾಗಿ ಓಡಾಡುತ್ತಿದ್ದರು. ಪದೇ ಪದೆ ಒಂದೇ ಪ್ರದೇಶದಲ್ಲಿ ಓಡಾಡುವುದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಾವು ಆಂಧ್ರ ಮೂಲದವರು. ಹೊಟ್ಟೆಪಾಡಿಗಾಗಿ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮೈಸೂರು: ಪೊಲೀಸ್ ವ್ಯಾನ್​​ಗೆ ದ್ವಿಚಕ್ರ ವಾಹನ ಡಿಕ್ಕಿ, ಸವಾರ ಪಾರು

ಸ್ಥಳೀಯರು ಹಿಡಿದು ಥಳಿಸಿ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಕ್ಕಾಗಮಿಸಿದ ಪೊಲೀಸರು ಇವರ ಪ್ರಾಥಮಿಕ ವಿಚಾರಣೆ ನಡೆಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ABOUT THE AUTHOR

...view details