ಬೆಳಗಾವಿ: ಜನಸ್ನೇಹಿ ಡಿಸಿಪಿ ಎಂದೇ ಖ್ಯಾತಿ ಪಡೆದಿದ್ದ ಡಾ. ವಿಕ್ರಮ್ ಆಮ್ಟೆ ವರ್ಗಾವಣೆ ಆಗಿದ್ದು, ಅವರ ಸ್ಥಾನಕ್ಕೆ ನೂತನ ಡಿಸಿಪಿ ಆಗಿ ರವೀಂದ್ರ ಗಡಾದಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಬೆಳಗಾವಿ DCP ಡಾ.ವಿಕ್ರಮ್ ಆಮ್ಟೆ ವರ್ಗಾವಣೆ; ಕುಂದಾನಗರಿಗೆ ರವೀಂದ್ರ ಗಡಾದಿ ನೂತನ ಡಿಸಿಪಿ - ಬೆಳಗಾವಿ ಡಿಸಿಪಿ ಡಾ.ವಿಕ್ರಮ ಆಮಟೆ ವರ್ಗಾವಣೆ
ಬೆಳಗಾವಿ ಡಿಸಿಪಿ ಡಾ.ವಿಕ್ರಮ್ ಆಮ್ಟೆ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಅವರ ಸ್ಥಾನಕ್ಕೆ ರವೀಂದ್ರ ಗಡಾದಿ ಅವರನ್ನು ನೇಮಕ ಮಾಡಿದೆ.
ಬೆಳಗಾವಿ ಡಿಸಿಪಿ ಡಾ.ವಿಕ್ರಮ ಆಮಟೆ ವರ್ಗಾವಣೆ; ನೂತನ ಡಿಸಿಪಿ ಆಗಿ ರವೀಂದ್ರ ಗಡಾದಿ ನೇಮಕ
ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ ಇವರ ಜಾಗಕ್ಕೆ ಡಾ. ಎಂ.ಬಿ. ಬೋರಲಿಂಗಯ್ಯ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಡಿಸಿಪಿ ಡಾ. ವಿಕ್ರಮ್ ಆಮ್ಟೆ ಅವರನ್ನು ವರ್ಗಾವಣೆ ಮಾಡಿ ರವೀಂದ್ರ ಗಡಾದಿ ಅವರನ್ನು ನೂತನ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.
ಡಿಸಿಪಿ ಆಮ್ಟೆ ಅವರು ದಕ್ಷ, ಜನಸ್ನೇಹಿ ಪೊಲೀಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ನಗರದಲ್ಲಿ ಮಟ್ಕಾ, ಜೂಜು ಸೇರಿದಂತೆ ಮುಂತಾದ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಿದ್ದರು.