ಬೆಳಗಾವಿ: ಮಹಾರಾಷ್ಟ್ರದ ಸಾವಿರಾರು ಅನಾಥ ಮಕ್ಕಳ ಪಾಲಿನ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ಬೆಳಗಾವಿಯ ಕಲಾವಿದರೊಬ್ಬರು ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.
ನಗರದ ವಡಗಾಂವ್ ನಿವಾಸಿ ಹಾಗೂ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಎಂಬುವರು ಸಮಾಜ ಸೇವಕಿ, ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಅವರ ಚಿತ್ರಬಿಡಿಸಿದ್ದಾರೆ. ಈ ಭಾವಚಿತ್ರ ಬಿಡಿಸಲು ಅಜಿತ್, ಸುಮಾರು 7 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ.